ADVERTISEMENT

‘ಪುತ್ತೂರುದ ಪಿಲಿಗೊಬ್ಬ’ಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 14:24 IST
Last Updated 6 ಅಕ್ಟೋಬರ್ 2024, 14:24 IST
ಪುತ್ತೂರಿನ ಮಹಾಲಿಂಗೇಶ್ವರ ದೇವಳದ ಎದುರಿನ ದೇವರಮಾರುಗದ್ದೆಯಲ್ಲಿ ಭಾನುವಾರ `ವಿಜಯ ಸಾಮ್ರಾಟ್' ಸಂಘಟನೆಯ ಆಶ್ರಯದಲ್ಲಿ ಪಿಲಿಗೊಬ್ಬು ಸಮಿತಿ ವತಿಯಿಂದ ನಡೆದ `ಪುತ್ತೂರುದ ಪಿಲಿಗೊಬ್ಬು' ಸ್ಪರ್ಧೆಯನ್ನು  ಸಂಸದ ನಳಿನ್ ಕುಮಾರ್ ಕಟೀಲ್ ಅವರು ಉದ್ಘಾಟಿಸಿದರು
ಪುತ್ತೂರಿನ ಮಹಾಲಿಂಗೇಶ್ವರ ದೇವಳದ ಎದುರಿನ ದೇವರಮಾರುಗದ್ದೆಯಲ್ಲಿ ಭಾನುವಾರ `ವಿಜಯ ಸಾಮ್ರಾಟ್' ಸಂಘಟನೆಯ ಆಶ್ರಯದಲ್ಲಿ ಪಿಲಿಗೊಬ್ಬು ಸಮಿತಿ ವತಿಯಿಂದ ನಡೆದ `ಪುತ್ತೂರುದ ಪಿಲಿಗೊಬ್ಬು' ಸ್ಪರ್ಧೆಯನ್ನು  ಸಂಸದ ನಳಿನ್ ಕುಮಾರ್ ಕಟೀಲ್ ಅವರು ಉದ್ಘಾಟಿಸಿದರು   

ಪುತ್ತೂರು: ತುಳುನಾಡಿನ ಪರಂಪರೆಯನ್ನು ಬಿಂಬಿಸುವ ‘ಪಿಲಿಗೊಬ್ಬು’ ಕೇವಲ ಮನರಂಜನೆಯ ಆಟವಾಗಿರದೆ ಧಾರ್ಮಿಕ ನೆಲೆಗಟ್ಟನ್ನು ಹೊಂದಿದೆ. ಪಿಲಿಗೊಬ್ಬುನಂತೆ ಧಾರ್ಮಿಕ ನಂಬಿಕೆಯ ಹಿನ್ನಲೆಯಲ್ಲಿ ಆರಂಭಗೊಂಡಿರುವ ಕೋಳಿ ಅಂಕ ಕೂಡ ನಿಷಿದ್ಧ ಅಲ್ಲ ಎಂದು ಮಾಜಿ ಸಂಸದ ನಳಿನ್‌ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.

ಪುತ್ತೂರಿನ ಮಹಾಲಿಂಗೇಶ್ವರ ದೇವಳದ ಎದುರಿನ ದೇವರಮಾರುಗದ್ದೆಯಲ್ಲಿ ಭಾನುವಾರ ‘ವಿಜಯ ಸಾಮ್ರಾಟ್’ ಸಂಘಟನೆಯ ಆಶ್ರಯದಲ್ಲಿ ಪಿಲಿಗೊಬ್ಬು ಸಮಿತಿ ವತಿಯಿಂದ ನಡೆದ `ಪುತ್ತೂರುದ ಪಿಲಿಗೊಬ್ಬು' ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಕತ್ತಾರ್ ಕರ್ನಾಟಕ ಸಂಘದ ಅಧ್ಯಕ್ಷ ಮೂಡಂಬೈಲು ರವಿ ಶೆಟ್ಟಿ ಮಾತನಾಡಿ, ‘ಸಾಮಾಜಿಕ ಕೆಲಸದ ಜತೆಗೆ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು’ ಎಂದರು.

ADVERTISEMENT

ಮಂಗಳೂರಿನ ಉದ್ಯಮಿ ಸುನಿಲ್ ಆಚಾರ್  ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಬಲರಾಮ ಆಚಾರ್ಯ ಮಾತನಾಡಿದರು.

ಉದ್ಯಮಿ ಹರ್ಷಕುಮಾರ್ ರೈ ಮಾಡಾವು, ಉಪ್ಪಿನಂಗಡಿ ಸಹಸ್ತ್ರಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ಬಿ.ಜಯರಾಮ ರೈ ಬಳಜ್ಜ, ಶಶಿಕುಮಾರ್ ರೈ ಬಾಲ್ಯೊಟ್ಟು, ಚನಿಲ ತಿಮ್ಮಪ್ಪ ಶೆಟ್ಟಿ, ಜೀವಂಧರ್ ಜೈನ್, ಸಾಜ ರಾಧಾಕೃಷ್ಣ ಆಳ್ವ, ರಾಜೇಶ್ ಬನ್ನೂರು, ಭಾಮಿ ಅಶೋಕ್ ಶೆಣೈ, ರಮೇಶ್ ರೈ ಮೊಟ್ಟೆತ್ತಡ್ಕ, ಸುಂದರ ಪೂಜಾರಿ ಬಡಾವು, ದಯಾಕರ ಆಳ್ವ ಕುಂಬ್ರ, ಎ.ಕೆ.ಜಯರಾಮ ರೈ ಕೆಯ್ಯೂರು, ಸುಧೀರ್ ರೈ ನೇಸರ, ವಿದ್ಯಾಮಾತಾ ಸಂಸ್ಥೆಯ ಭಾಗ್ಯೇಶ್ ರೈ ಇದ್ದರು.

ಸಹಜ್ ರೈ ಬಳಜ್ಜ ಸ್ವಾಗತಿಸಿದರು. ಪುತ್ತೂರು ಉಮೇಶ್ ನಾಯಕ್ ಪ್ರಸ್ತಾವಿಕವಾಗಿ ಮಾತನಾಡಿದರು. ಆದರ್ಶ ಶೆಟ್ಟಿ ವಂದಿಸಿದರು. ಬಾಲಕೃಷ್ಣ ಪೊರ್ದಾಳ್‌ ನಿರೂಪಿಸಿದರು. ಸುಜಿತ್ ರೈ ಪಾಲ್ತಾಡ್, ನಾಗರಾಜ್ ಭಟ್ ನಡುವಡ್ಕ,  ಶರತ್ ಆಳ್ವ, ದೇವಿಪ್ರಕಾಶ್ ಭಂಡಾರಿ, ಅಶೋಕ್ ಅಡೂರು ರಾಜೇಶ್ ಕೆ.ಗೌಡ,  ಅರುಣ್ ರೈ ಮತ್ತಿತರರು ಇದ್ದರು.

ಪುತ್ತೂರಿನಲ್ಲಿ ಭಾನುವಾರ ನಡೆದ `ಪುತ್ತೂರುದು ಪಿಗೊಬ್ಬು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.