ಬಂಟ್ವಾಳ: ‘ದಿ.ಬಿ.ರಘು ಸಪಲ್ಯರು ಜಿಲ್ಲೆಯ ವಿವಿಧ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಅಭಿವೃದ್ಧಿಯಲ್ಲಿ, ಪ್ರಚಾರ ಮತ್ತು ಅಧಿಕಾರದ ಹಂಗಿಲ್ಲದೆ ಕ್ರಿಯಾಶೀಲರಾಗಿದ್ದರು’ ಎಂದು ಆರ್‌ಎಸ್‌ಎಸ್ ಮುಖಂಡ ಕೆ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಇಲ್ಲಿನ ಪಾಣೆಮಂಗಳೂರು ಸುಮಂಗಲಾ ಸಭಾಂಗಣದಲ್ಲಿ ನಡೆದ ದಿವಂಗತ ಬಿ.ರಘು ಸಪಲ್ಯ ಅವರ ಶ್ರದ್ಧಾಂಜಲಿ ಸಭೆಯಲ್ಲಿ, ನುಡಿ ನಮನ ಸಲ್ಲಿಸಿ ಅವರು ಮಾತನಾಡಿದರು.
ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಮಾತನಾಡಿ, ‘ದಿ. ಬಿ.ರಘು ಸಪಲ್ಯರು ಧಾರ್ಮಿಕ ಕ್ಷೇತ್ರದಲ್ಲಿ ನಗು ಮುಖದಿಂದ ಕ್ರಿಯಾಶೀಲರಾಗಿದ್ದರು' ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, 'ರಘು ಸಪಲ್ಯರು ಪಕ್ಷ, ಸಿದ್ಧಾಂತಗಳ ಭಿನ್ನತೆ ನಡುವೆಯೂ ಎಲ್ಲಾ ಜಾತಿ, ಧರ್ಮಗಳೊಂದಿಗೆ ಸ್ನೇಹದಿಂದ ಬೆರೆತು ಎಲ್ಲರಿಗೂ ಹತ್ತಿರವಾಗಿದ್ದರು' ಎಂದರು.
ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ ಮತ್ತು ಕೆ.ಪದ್ಮನಾಭ ಕೊಟ್ಟಾರಿ ತುರ್ತು ಪರಿಸ್ಥಿತಿ ವೇಳೆ ಒಟ್ಟಾಗಿ ನಡೆಸಿದ ಹೋರಾಟಗಳನ್ನು ನೆನಪಿಸಿಕೊಂಡರು.
ವೈದ್ಯ ವಿಶ್ವನಾಥ ನಾಯಕ್, ಬೀಡಿ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಹನೀಫ್ ಗೋಳ್ತಮಜಲು, ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ, ಜಿಲ್ಲಾ ಗಾಣಿಗರ ಸಂಘದ ಮಾಜಿ ಅಧ್ಯಕ್ಷ ತಾರನಾಥ ಸುವರ್ಣ, ಪ್ರಮುಖರಾದ ಜಗನ್ನಾಥ ಬಂಗೇರ, ಮಾಧವ ಎಸ್.ಮಾವೆ, ಹರಿರಾಮಚಂದ್ರ ಉಪ್ಪಿನಂಗಡಿ, ಭಾಸ್ಕರ ಎಡಪದವು, ದೇವಪ್ಪ ಮುಂಡ್ಕೂರು, ರಾಜೇಶ ಬಂಗೇರ ಮೂಡುಬಿದ್ರೆ, ಕೃಷ್ಣಪ್ಪ ಬಂಗೇರ ನುಡಿನಮನ ಸಲ್ಲಿಸಿದರು.
ಬಿಜೆಪಿ ಕ್ಷೇತ್ರ ಘಟಕದ ಅಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್, ಬೂಡ ಅಧ್ಯಕ್ಷ ಬೇಬಿ ಕುಂದರ್, ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ, ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷ ವಿಶ್ವಾಸ್ ದಾಸ್ ಕುಮಾರ್, ಪ್ರಮುಖರಾದ ರಾಮದಾಸ್ ಬಂಟ್ವಾಳ್, ದಿನೇಶ ಅಮ್ಟೂರು, ಪ್ರಭಾಕರ ಪ್ರಭು, ಮಚ್ಚೇಂದ್ರನಾಥ ಸಾಲ್ಯಾನ್, ಆನಂದ ಶಂಭೂರು, ಪ್ರೇಮನಾಥ ಶೆಟ್ಟಿ, ಪುರುಷೋತ್ತಮ ಸಾಲ್ಯಾನ್, ಪಾಂಡುರಂಗ ಪ್ರಭು, ಮಾಧವ ಕರ್ಬೆಟ್ಟು, ಪಿ.ಎಸ್.ಅಬ್ದುಲ್ ಹಮೀದ್, ಕೇಶವ ಮಳಲಿ, ತಿಮ್ಮಪ್ಪ ಸಪಲ್ಯ ಇಡ್ಕಿದು ಮತ್ತಿತರರು ಇದ್ದರು.
ನಾಗೇಶ ಕಲ್ಲಡ್ಕ ಸ್ವಾಗತಿಸಿದರು. ಉಮೇಶ ಬೋಳಂತೂರು ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.