ADVERTISEMENT

ಮಂಗಳೂರು | ಕಾರಾಗೃಹದ ಮೇಲೆ ದಾಳಿ: ಮೊಬೈಲ್, ಡ್ರಗ್ಸ್, ಗಾಂಜಾ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 14:09 IST
Last Updated 25 ಜುಲೈ 2024, 14:09 IST
<div class="paragraphs"><p>ಸಾಂಕೇತಿಕ ಚಿತ್ರ&nbsp;</p></div>

ಸಾಂಕೇತಿಕ ಚಿತ್ರ 

   

ಮಂಗಳೂರು: ನಗರದ ಕೋಡಿಯಾಲ್‌ಬೈಲ್‌ನಲ್ಲಿರುವ ಕಾರಾಗೃಹದ ಮೇಲೆ ಪೊಲೀಸರು ದಾಳಿ ನಡೆಸಿ 25 ಮೊಬೈಲ್ ಫೋನ್‌ಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಒಂದು ಬ್ಲೂಟೂಥ್ ಡಿವೈಸ್, ಐದು ಇಯರ್ ಫೋನ್‌ಗಳು, ಒಂದು ಪೆನ್ ಡ್ರೈವ್, ಐದು ಚಾರ್ಜರ್‌ಗಳು, ಒಂದು ಸೆಟ್ ಕತ್ತರಿ, ಮೂರು ಕೇಬಲ್‌ಗಳು, ಗಾಂಜಾ ಮತ್ತು ಡ್ರಗ್ಸ್ ಪ್ಯಾಕೆಟ್‌ಗಳು ಕಾರಾಗೃಹದಲ್ಲಿ ದೊರೆತಿವೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

ADVERTISEMENT

ಗುರುವಾರ ನಸುಕಿನ 4 ಗಂಟೆಗೆ ಇಬ್ಬರು ಡಿಸಿಪಿ, ಮೂವರು ಎಸಿಪಿ, 15 ಇನ್‌ಸ್ಪೆಕ್ಟರ್, 150ಕ್ಕೂ ಹೆಚ್ಚು ಸಿಬ್ಬಂದಿ ಏಕಕಾಲದಲ್ಲಿ ದಾಳಿ ನಡೆಸಿದರು. ಪ್ರತ್ಯೇಕ ತಂಡಗಳಲ್ಲಿ ಪ್ರತಿ ಬ್ಲಾಕ್‌ನಲ್ಲಿ ತಪಾಸಣೆ ನಡೆಸಲಾಯಿತು. ದಾಳಿ ನಡೆಸುವ ಕೊನೆಯ ಕ್ಷಣದ‌ವರೆಗೂ ಗೋಪ್ಯತೆ ಕಾಪಾಡಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆ ನಡೆಯಂತೆ ಎಚ್ಚರವಹಿಸಲು ಇಲಾಖೆ ಬದ್ಧವಾಗಿದೆ. ಸಾಕಷ್ಟು ಭದ್ರತೆ‌ಗಳ ನಡುವೆಯೂ ಮೊಬೈಲ್ ಫೋನ್ ಮತ್ತಿತರ ಸಾಮಗ್ರಿಗಳು, ಗಾಂಜಾ‌ ಮತ್ತು ಡ್ರಗ್ಸ್‌ಗಳನ್ನು ಜೈಲಿನೊಳಗೆ ಹೇಗೆ ಕೊಂಡೊಯ್ಯಲಾಯಿತು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.