ADVERTISEMENT

ಮುಡಿಪು: ವಿವಿಧೆಡೆ ಮಳೆ ಹಾನಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2023, 15:55 IST
Last Updated 8 ಜುಲೈ 2023, 15:55 IST
ಹರೇಕಳ ಗ್ರಾಮದ ಮಲಾರ್ ಎಂಬಲ್ಲಿ ಫಾತಿಮತ್ ಝೊಹರಾ ಅವರ ಮನೆ ಕುಸಿದಿದೆ
ಹರೇಕಳ ಗ್ರಾಮದ ಮಲಾರ್ ಎಂಬಲ್ಲಿ ಫಾತಿಮತ್ ಝೊಹರಾ ಅವರ ಮನೆ ಕುಸಿದಿದೆ   

ಮುಡಿಪು: ಭಾರಿ ಮಳೆಗೆ ಕೊಣಾಜೆ–ಮುಡಿಪು ವ್ಯಾಪ್ತಿಯ ವಿವಿಧೆಡೆ ಮನೆಗಳಿಗೆ ಹಾನಿಯಾಗಿದೆ.

ಇರಾ ಗ್ರಾಮದ ಜಯರಾಮ ಬೆಳ್ಚಡ ಅವರ ಮನೆ ಕುಸಿದಿದೆ. ಇರಾ ಗ್ರಾಮದ ಕೆಳಗಿನ ಮನೆ ಎಂಬಲ್ಲಿ ಅಬ್ದುಲ್ ಅಝೀಜ್ ಅವರ ಮನೆಯ ಆವರಣ‌ಗೋಡೆ ಕುಸಿದಿದೆ. ಪಾವೂರು ಗ್ರಾಮದ ಗಾಡಿಗದ್ದೆಯ ತಗ್ಗುಪ್ರದೇಶದಲ್ಲಿ ನೀರು ತುಂಬಿ ಆವರಣ ಗೋಡೆ ಕುಸಿದು ಬಿದ್ದಿದ್ದು, ಹರೇಕಳ ಗ್ರಾಮದ ಮಲಾರ್ ಎಂಬಲ್ಲಿ ಫಾತಿಮತ್ ಝೊಹರಾ ಅವರ ಮನೆಯೂ ಕುಸಿದಿದೆ.

ಇರಾ ಗ್ರಾಮದಲ್ಲಿ ಜಯರಾಮ ಬೆಳ್ಚಡ ಅವರ ಮನೆ ಕುಸಿದಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT