ADVERTISEMENT

ಪುತ್ತೂರು | ಮನೆಯ ಗೋಡೆ ಕುಸಿತ: ಕುಟುಂಬ ಅತಂತ್ರ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 14:14 IST
Last Updated 1 ಜುಲೈ 2024, 14:14 IST
ಪುತ್ತೂರು ತಾಲ್ಲೂಕಿನ ಅರಿಯಡ್ಕ ಗ್ರಾಮದ ಶಾಂತಿಮೂಲೆಯಲ್ಲಿ ಮನೆಯೊಂದರ ಗೋಡೆ ಕುಸಿದಿದೆ
ಪುತ್ತೂರು ತಾಲ್ಲೂಕಿನ ಅರಿಯಡ್ಕ ಗ್ರಾಮದ ಶಾಂತಿಮೂಲೆಯಲ್ಲಿ ಮನೆಯೊಂದರ ಗೋಡೆ ಕುಸಿದಿದೆ   

ಪುತ್ತೂರು: ತಾಲ್ಲೂಕಿನ ಅರಿಯಡ್ಕ ಗ್ರಾಮದ ಶಾಂತಿಮೂಲೆ ಎಂಬಲ್ಲಿನ ಬಡ ಕುಟುಂಬದ ಮನೆಯೊಂದರ ಗೋಡೆ ಕುಸಿದಿದ್ದು, ಕುಟುಂಬ ಅತಂತ್ರ ಸ್ಥಿತಿಯಲ್ಲಿದೆ.

ಅರಿಯಡ್ಕ ಗ್ರಾಮದ ಪೈಲಕಲ್ಲು ಸಮೀಪದ ಶಾಂತಿಮೂಲೆ ನಿವಾಸಿ ಈಶ್ವರ ನಾಯ್ಕ, ಕಮಲ ಅವರ ಹೆಂಚಿನ ಮನೆಯ ಇಟ್ಟಿಗೆ ಗೋಡೆ ಕುಸಿದು ಬಿದ್ದಿದ್ದು, ಚಾವಣಿ ಕುಸಿಯುವ ಹಂತದಲ್ಲಿದೆ.

ಅರಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಸದಸ್ಯ ನಾರಾಯಣ ನಾಯ್ಕ ಚಾಕೋಟೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುನಿಲ್‌ಕುಮಾರ್‌, ಕಾರ್ಯದರ್ಶಿ ಶಿವರಾಮ ಮೂಲ್ಯ, ಗ್ರಾಮ ಆಡಳಿತಾಧಿಕಾರಿ ಗೋಪಿಲಾಲ್ ಪರಿಶೀಲನೆ, ಕೆಯ್ಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶರತ್ ಮಾಡಾವು ಅವರು ಸ್ಥಳಕ್ಕೆ ಭೇಟಿ ನೀಡಿದರು.

ADVERTISEMENT

ಅರಿಯಡ್ಕ ಪಂಚಾಯಿತಿ ವತಿಯಿಂದ ಮನೆಯ ಚಾವಣಿಗೆ ಟಾರ್ಪಾಲ್‌ ಹೊದಿಕೆಯ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಡಲಾಗಿದೆ.

ಕಮಲಾ ಅವರದ್ದು ಬಡ ಕುಟುಂಬವಾಗಿದ್ದು, ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮನೆ ಕುಸಿದಿರುವುದರಿಂದ ಸಂಬಂಧಿಕ ಮನೆಯನ್ನು ಆಶ್ರಯಿಸುವಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.