ಉಳ್ಳಾಲ: ಸತತ ಮಳೆಯಿಂದಾಗಿ ಮುಕ್ಕಚ್ಚೇರಿ, ಹಿಲೆರಿಯನಗರ, ಕೈಕೋ, ಮೊಗವೀರ ಪಟ್ಣ, ಕೋಡಿ, ಕೋಟೆಪುರದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು ತಡೆಗೋಡೆ ಇರುವುದರಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ. ಆದರೆ, ಪ್ರದೇಶದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ಬಟ್ಟಪ್ಪಾಡಿಯಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಅಪಾಯದಂಚಿನಲ್ಲಿರುವ ಒಂದು ಮನೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿ ಮತ್ತಡಿ, ತಹಶೀಲ್ದಾರ್ ಪ್ರಭಾಕರ್ ಖರ್ಜೂರೆ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಲ್ಲಾಪು ಬಳಿ ಆರು ಮನೆಗಳು ಜಲಾವೃತಗೊಂಡಿದ್ದು, ಎರಡು ಮನೆಗಳಿಗೆ ನೀರು ನುಗ್ಗಿದೆ. ಸೇವಂತಿ ಗುಡ್ಡೆಯಲ್ಲಿ ಮನೆಯ ಆವರಣಗೋಡೆ ಕುಸಿದೆ.
ಘಟನಾ ಸ್ಥಳಕ್ಕೆ ಪಿಡಬ್ಲ್ಯೂಡಿ ಎಂಜಿನಿಯರ್ ದಾಸ್ ಪ್ರಕಾಶ್, ಪೌರಾಯುಕ್ತ ವಾಣಿ ಆಳ್ವ, ಕೌನ್ಸಿಲರ್ ಬಾಜಿಲ್ ಡಿಸೋಜ, ಶಶಿ ಕಲಾ ಮುಹಮ್ಮದ್ ಮುಕಚೇರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಎಂಜಿನಿಯರ್ ಅವರ ಸೂಚನೆ ಮೇರೆಗೆ ನೀರು ಹರಿದು ಹೋಗಲು ತಾತ್ಕಾಲಿಕ ಚರಂಡಿ ವ್ಯವಸ್ಥೆ ಮಾಡಲಾಗಿದೆ. ಕೋಟೆಪುರದಲ್ಲಿ ರುಕಿಯ ಎಂಬವರ ಮನೆ ಕುಸಿದು ಬಿದ್ದು ಭಾಗಶಃ ಹಾನಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.