ಮೂಡುಬಿದಿರೆ: ಅಕ್ಬರನ ಕಾಲದಲ್ಲಿ ಚಲಾವಣೆಯಲ್ಲಿದ್ದ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳ ಒಂದು ಬದಿಯಲ್ಲಿ ರಾಮ ಮತ್ತು ಸೀತೆಯ ಚಿತ್ರ ಇನ್ನೊಂದು ಬದಿಯಲ್ಲಿ ಆಗ್ರ ಠಂಕಸಾಲೆಯ ವಿವರ ಇತ್ತು ಎನ್ನುವುದು ಅಂದಿನ ನಾಣ್ಯಗಳು ಹೇಳುತ್ತವೆ.
ಹವ್ಯಾಸಿ ನಾಣ್ಯ ಸಂಗ್ರಾಹಕ, ಮೂಡುಬಿದಿರೆ ಗಣೇಶ್ ಸ್ಟೀಲ್ ಸೆಂಟರ್‌ನ ನಿತ್ಯಾನಂದ ಪೈ ಅವರ ಸಂಗ್ರಹದಲ್ಲಿರುವ ನಾಣ್ಯದಲ್ಲಿ ಈ ವೈಶಿಷ್ಟ್ಯ ಕಾಣಸಿಕ್ಕಿದೆ.
ವಿಜಯನಗರದ ಸಂಗಮ ವಂಶದ 1ನೇ ದೇವರಾಯನ ಮಗ ರಾಮಚಂದ್ರ (ಕಾಲ 1422)ನ ಅವಧಿಯಲ್ಲಿ 3.4ಗ್ರಾಂ ತೂಕದ ರಾಮ, ಲಕ್ಷ್ಮಣರಿರುವ ಚಿನ್ನದ ಕೋದಂಡ ಗದ್ಯಾಣ ಚಲಾವಣೆಗೆ ತಂದಿದ್ದ ಎನ್ನಲಾಗಿದೆ. ಬಳಿಕ ಆರವೀಡು ವಂಶದ ರಾಜ ತಿರುಮಲರಾಯನ ಕಾಲ (1570-78)ದಲ್ಲಿ 3.4ಗ್ರಾಂ ತೂಕದ ರಾಮ, ಲಕ್ಷ್ಮಣ, ಸೀತೆ ಇರುವ ಚಿನ್ನದ ವರಹ, 1.7 ಗ್ರಾಂ ತೂಕದ ಅರ್ಧ ವರಹ ಚಲಾವಣೆಗೆ ತಂದಿದ್ದ ಎಂದು ನಿತ್ಯಾನಂದ ಪೈ ನೆನಪಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.