ಉಪ್ಪಿನಂಗಡಿ: ಅಶಕ್ತರಿಗೆ, ಅನಾಥರಿಗೆ, ಬಡವರಿಗೆ ಸಹಾಯ ಮಾಡಿದವರಿಗೆ ಅಲ್ಲಾಹುವಿನ ಪ್ರೀತಿ ಪ್ರಾಪ್ತವಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ’ ಎಂದು ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿ ಮುದರ್ರಿಸ್ ಅಬ್ದುಲ್ ಸಲಾಂ ಫೈಝಿ ಎಡಪ್ಪಾಲ ಹೇಳಿದರು.
ಉಪ್ಪಿನಂಗಡಿಯ ಉಬಾರ್ ಡೋನಾರ್ಸ್ ಹೆಲ್ಫ್ಲೈನ್ ವತಿಯಿಂದ ಹಮ್ಮಿಕೊಳ್ಳಲಾದ ರಂಜಾನ್ ಕಿಟ್ ವಿತರಣೆಯಲ್ಲಿ ಅವರು ಮಾತನಾಡಿದರು.
ಅನುಗ್ರಹ ಕ್ರೆಡಿಟ್ ಕಾರ್ಪೊರೇಟಿವ್ ಸೊಸೈಟಿ ಸೊಸೈಟಿಯ ನಿರ್ದೇಶಕ ವಿನ್ಸೆಂಟ್ ಫೆರ್ನಾಂಡಿಸ್ ಮಾತನಾಡಿ, ‘ಹಲವು ವರ್ಷಗಳಿಂದ ಉಬಾರ್ ಡೋನರ್ಸ್ ತಂಡದ ಕಾರ್ಯ ವೈಖರಿ ನೋಡುತ್ತಿದ್ದು, ಅವರು ಮಾಡುತ್ತಿರುವ ಮಾನವೀಯ ಕಾರ್ಯ ಭಗವಂತ ಮೆಚ್ಚುವಂಥದ್ದು’ ಎಂದರು.
ಉಬಾರ್ ಡೋನರ್ ಹೆಲ್ಪ್ಲೈನ್ ಸಂಸ್ಥೆಯ ಅಧ್ಯಕ್ಷ ಶಬೀರ್ ಕೆಂಪಿ ಮಾತನಾಡಿದರು. ‘ಉಪ್ಪಿನಂಗಡಿ ಪರಿಸರದ ಉದ್ಯಮಿಗಳು,
ದಾನಿಗಳು ಮತ್ತು ವಿದೇಶದಲ್ಲಿರುವವರ ಸಹಾಯ ಪಡೆದುಕೊಂಡು ಅನಾರೋಗ್ಯ ಪೀಡಿತರಿಗೆ ನೆರವು, ಆಹಾರದ ಕಿಟ್ ವಿತರಣೆ, ಬಡ ಹೆಣ್ಣು ಮಕ್ಕಳ ಮದುವೆಗೆ ನೆರವು ಸೇರಿದಂತೆ ಹಲವು ರೀತಿಯ ಸಮಾಜ ಸೇವೆಯನ್ನು ಮಾಡುತ್ತಾ ಬಂದಿದ್ದೇವೆ. ಈ ಬಾರಿ 350 ಕುಟುಂಬಗಳಿಗೆ ಕಿಟ್ ವಿತರಣೆಗೆ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದರು.
ಕುದ್ಲೂರು ನೂರಾನಿಯ್ಯ ಜುಮಾ ಮಸೀದಿಯ ಖತೀಬ್ ಅದ್ನಾನ್ ಅನ್ಸಾರಿ, ಹೈದರ್ ಸಅದಿ, ಅಶ್ರಫ್ ಹನೀಫಿ, ಮಾಲಿಕ್ ದೀನಾರ್ ಜುಮಾ ಮಸೀದಿ ಅಧ್ಯಕ್ಷ ಯೂಸುಫ್ ಎಚ್., ಪ್ರಧಾನ ಕಾರ್ಯದರ್ಶಿ ಅಬ್ದುಲ್ ಶುಕೂರ್ ಶುಕ್ರಿಯಾ, ಕೋಶಾಧಿಕಾರಿ ಮುಸ್ತಫಾ, ಪದಾಧಿಕಾರಿ ರವೂಫ್ ಯು.ಟಿ., ಸಿದ್ದಿಕ್ ಕೆಂಪಿ, ಇಬ್ರಾಹಿಂ ಆಚೀ, ಫಾರೂಕ್ ಅಂಡೆತ್ತಡ್ಕ, ಮುನೀರ್ ಎನ್ಮಾಡಿ, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸದಸ್ಯ ಯು.ಟಿ. ತೌಸೀಫ್, ಉದ್ಯಮಿ ಫೈಝಲ್, ಅಶ್ರಫ್ ಡಿಸೈನ್, ಇಸ್ಮಾಯಿಲ್ ತಂಙಳ್, ಉಬಾರ್ ಡೋನರ್ಸ್ ಹೆಲ್ಪ್ ಲೈನ್ ಪದಾಧಿಕಾರಿಗಳಾದ ಶುಕೂರ್ ಮೇದರಬೆಟ್ಟು, ರಫೀಕ್ ಮಾಸ್ಟರ್, ಶಬೀರ್ ನಂದಾವರ, ಜಮಾಲ್ ಕೆಂಪಿ ಇದ್ದರು. ಜಲೀಲ್ ಮುಖ್ರಿ ಸ್ವಾಗತಿಸಿದರು. ಇರ್ಷಾದ್ ಯು.ಟಿ. ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.