ಸುಬ್ರಹಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಳದ ಬಿಲದ್ವಾರದ ಮಂಟಪದ ಪೂರ್ವ ಭಾಗದನೂತನ ಶ್ರೀ ದೇವರ ಕಟ್ಟೆಯಲ್ಲಿ ಶಿಖರ ಪ್ರತಿಷ್ಠೆ ಬುಧವಾರ ನೆರವೇರಿತು.
ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರ ನಿರ್ದೇಶನದಲ್ಲಿ ಪುರೋಹಿತ ವೇದಮೂರ್ತಿ ಮಧುಸೂದನ ಕಲ್ಲೂರಾಯ, ಸುಬ್ರಹ್ಮಣ್ಯ ಕೋನ್ರಾಯ, ರಾಜೀವ ಕೊಕ್ಕಡ, ವೆಂಕಟಕೃಷ್ಣ ಕಲ್ಲೂರಾಯ, ವಾಸುದೇವ ರಾವ್ ವಿವಿಧ ವೈದಿಕ ವಿದಿವಿದಾನ ನೆರವೇರಿಸಿದರು. ಮೊದಲು ಪವಮಾನ ಹೋಮ ನಡೆಯಿತು. ಶಿಖರ ಪ್ರತಿಷ್ಠೆಯ ಅಂಗವಾಗಿ ಮಂಗಳವಾರ ರಾತ್ರಿ ವಾಸ್ತು ರಕ್ಷೊಘ್ನ, ವಾಸ್ತು ಬಲಿ ನೆರವೇರಿತು.
ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹೇಶ್ ಕುಮಾರ್ ಕೆ.ಎಸ್, ಕೃಷ್ಣಮೂರ್ತಿ ಭಟ್,ಕೇನ್ಯ ರವೀಂದ್ರನಾಥ ಶೆಟ್ಟಿ, ಮಾಧವ.ಡಿ, ಬಾಲಕೃಷ್ಣ ಬಳ್ಳೇರಿ, ರಾಜೀವಿ ಆರ್. ರೈ, ದಮಯಂತಿ ಕೂಜುಗೋಡು, ದೇವಳದ ಹೆಬ್ಬಾರ್ ಷಣ್ಮುಖ ಉಪಾರ್ಣ, ಕುಕ್ಕೆ ಕ್ಷೇತ್ರದ ಮಾಸ್ಟರ್ ಪ್ಲಾನ್ ಅಭಿವೃದ್ಧಿ ಸಮಿತಿ ಸದಸ್ಯ ಶಿವರಾಮ ರೈ, ಸಹಸ್ರಾರು ಭಕ್ತರು ಇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.