ADVERTISEMENT

ಸಿದ್ಧಕಟ್ಟೆ: ರೋಟರಿ ಕಂಬಳ ಕೂಟ ಫಲಿತಾಂಶ ಪ್ರಕಟ

ಸಬ್ ಜೂನಿಯರ್ ನೇಗಿಲು– ಹಗ್ಗ ವಿಭಾಗದಲ್ಲಿ ನಡೆದ ಕಂಬಳ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 13:39 IST
Last Updated 20 ಅಕ್ಟೋಬರ್ 2024, 13:39 IST
ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆಯಲ್ಲಿ ಶನಿವಾರ ನಡೆದ ರೋಟರಿ ಕಂಬಳ ಕೂಟದಲ್ಲಿ ಮರಿ ಕೋಣಗಳ ಓಟದ ದೃಶ್ಯ
ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆಯಲ್ಲಿ ಶನಿವಾರ ನಡೆದ ರೋಟರಿ ಕಂಬಳ ಕೂಟದಲ್ಲಿ ಮರಿ ಕೋಣಗಳ ಓಟದ ದೃಶ್ಯ   

ಬಂಟ್ವಾಳ: ಇಲ್ಲಿನ ಸಿದ್ಧಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆಯಲ್ಲಿ ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ಶನಿವಾರ ಹಮ್ಮಿಕೊಂಡಿದ್ದ ಸಬ್ ಜೂನಿಯರ್ ನೇಗಿಲು ಮತ್ತು ಹಗ್ಗ ವಿಭಾಗದ ‘ರೋಟರಿ ಕಂಬಳ ಕೂಟ’ದ ಫಲಿತಾಂಶ ಪ್ರಕಟಗೊಂಡಿದೆ.

ವಿಜೇತರಿಗೆ ಪ್ರಥಮ ಬಹುಮಾನವಾಗಿ ಅರ್ಧ ಪವನ್ ಮತ್ತು ದ್ವಿತೀಯ ಬಹುಮಾನವಾಗಿ ಕಾಲು ಪವನ್ ಚಿನ್ನದ ಪದಕ ಹಾಗೂ ತೃತೀಯ ಮತ್ತು ಚತುರ್ಥ ಬಹುಮಾನವಾಗಿ ತಲಾ ₹ 5ಸಾವಿರ ನಗದು ನೀಡಲಾಯಿತು.

ಹಗ್ಗ ವಿಭಾಗ: ಪ್ರಥಮ: ಎಂಬತ್ತು ಬಡಗುಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ (ಬಿ). ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ. ದ್ವಿತೀಯ: ಬಳ್ಕುಂಜೆಗುತ್ತು ಮಲ್ಲಿಕಾ ಯಶವಂತ ಶೆಟ್ಟಿ. ಓಡಿಸಿದವರು: ಬೈಂದೂರು ಕೆರ್ಗಲ್ ಗರಡಿಮನೆ ಹರೀಶ ಪೂಜಾರಿ.

ADVERTISEMENT

ತೃತೀಯ: ಮಾರೂರು ಬಿರ್ನೊಟ್ಟು ಅಶ್ವತ್ಥ್‌ ಶೆಟ್ಟಿ. ಓಡಿಸಿದವರು: ಅತ್ತೂರು ಕೊಂಡಗೆ ಸುಧೀರ್ ಸಾಲ್ಯಾನ್.

ಚತುರ್ಥ: ಸಿದ್ಧಕಟ್ಟೆ ಕೆರೆಬಳಿ ಲತೀಫ್. ಓಡಿಸಿದವರು: ಸಿದ್ಧಕಟ್ಟೆ ಪ್ರಸಾದ್.

ನೇಗಿಲು ವಿಭಾಗ: ಪ್ರಥಮ: ಶ್ರೀಸ್ವಾಮಿ ಧಾಮ ಹೊಳೆಕಟ್ಟು ಕುಂಭಾಶ್ರೀ. ಓಡಿಸಿದವರು: ಬೈಂದೂರು ಮಂಜುನಾಥ ಗೌಡ. ದ್ವಿತೀಯ: ಮುಡಾರು ಹಚ್ಚೊಟ್ಟು ಫ್ಲೋರಾ ನಿವಾಸ ರೋಹನ್ ರಂಜಿತ್ ಫರ್ನಾಂಡಿಸ್‌ (ಎ). ಓಡಿಸಿದವರು: ಕಕ್ಯಪದವು ಮಹಮ್ಮಾಯಿ ಗೌತಮ್.

ತೃತೀಯ: ಅನಂತಾಡಿ ವೈಶಾಕ್ ವೈಭವ ಮಡಿವಾಳ (ಎ). ಓಡಿಸಿದವರು: ಮಂಗಲ್ಪಾಡಿ ರಕ್ಷಿತ್ ಶೆಟ್ಟಿ. ಚತುರ್ಥ: ಮೊಗರುಗುತ್ತು ನಿತಿನ್ ದಿವಿನ್ ರೈ. ಓಡಿಸಿದವರು: ಪಡುಸಕೂರು ಪೃಥ್ವಿರಾಜ್ ಪೂಜಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.