ADVERTISEMENT

ಪುತ್ತೂರು: ರಬ್ಬರ್ ತೋಟಕ್ಕೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 7:54 IST
Last Updated 29 ಫೆಬ್ರುವರಿ 2024, 7:54 IST
ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಮಡ್ಯಂಗಳ ಸಮೀಪದ ಪಲ್ಲತ್ತಡ್ಕ ನಿವಾಸಿ ಗೋವಿಂದ ನಾಕ್ ಅವರಿಗೆ ಸೇರಿದ ರಬ್ಬರ್ ತೋಟದಲ್ಲಿ ವಿದ್ಯುತ್ ಅವಘಡ ಸಂಭವಿಸಿದ್ದು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು
ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಮಡ್ಯಂಗಳ ಸಮೀಪದ ಪಲ್ಲತ್ತಡ್ಕ ನಿವಾಸಿ ಗೋವಿಂದ ನಾಕ್ ಅವರಿಗೆ ಸೇರಿದ ರಬ್ಬರ್ ತೋಟದಲ್ಲಿ ವಿದ್ಯುತ್ ಅವಘಡ ಸಂಭವಿಸಿದ್ದು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು   

ಪುತ್ತೂರು: ರಬ್ಬರ್ ತೋಟದಲ್ಲಿ ವಿದ್ಯುತ್ ಅವಘಡ ಸಂಭವಿಸಿ ಹಲವು ರಬ್ಬರ್ ಮರಗಳು ಹಾಗೂ ಇತರೆ ಕೆಲವು ಮರಗಳು ಸುಟ್ಟು ಹೋದ ಘಟನೆ ಬುಧವಾರ ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದಲ್ಲಿ ನಡೆದಿದೆ.

ಅರಿಯಡ್ಕ ಗ್ರಾಮದ ಮಡ್ಯಂಗಳ ಸಮೀಪದ ಪಲ್ಲತ್ತಡ್ಕ ನಿವಾಸಿ ಗೋವಿಂದ ನಾಕ್ ಅವರಿಗೆ ಸೇರಿದ ರಬ್ಬರ್ ತೋಟದಲ್ಲಿ ವಿದ್ಯುತ್ ಅವಘಡ ಸಂಭವಿಸಿದೆ. ರಬ್ಬರ್ ತೋಟದ ನಡುವೆ ಹಾದು ಹೋಗಿರುವ ವಿದ್ಯುತ್ ಲೈನಿಗೆ ಮರದ ಕೊಂಬೆ ತಾಗಿ  ವಿದ್ಯುತ್ ಶಾರ್ಟ್‌ ಸಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ.

ಪುತ್ತೂರು ಅಗ್ನಿ ಶಾಮಕ ದಳದವರು  ಬೆಂಕಿ ನಂದಿಸಿದರು. ಅಷ್ಟರಲ್ಲಾಗಲೇ ಹಲವು ರಬ್ಬರ್ ಮರಗಳು ಬೆಂಕಿಗೆ ಆಹುತಿಯಾಗಿದ್ದವು. ಅಗ್ನಿಶಾಮಕ ದಳದ  ರುಕ್ಮಯ್ಯ ಗೌಡ, ಚಾಲಕ ಕಿರಣ್‌ಕುಮಾರ್, ಕುಶಾಲಪ್ಪ ಗೌಡ, ತೌಶಿಪ್ ಮಲ್ಲಾ, ಮೌನೇಶ್ವರ್ ಇದ್ದರು. ಮೆಸ್ಕಾಂ ಸಿಬ್ಬಂದಿ ಹಾಗೂ ಸ್ಥಳೀಯರು ಬೆಂಕಿ ನಂದಿಸಲು ಸಹಕರಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.