ADVERTISEMENT

ಸೇಂಟ್ ಜೋಸೆಫ್: ತತ್ವಶಾಸ್ತ್ರದ ಉನ್ನತ ಶಿಕ್ಷಣ ಸಂಸ್ಥೆಯಾಗಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2024, 5:25 IST
Last Updated 25 ಜನವರಿ 2024, 5:25 IST
ಸೇಂಟ್‌ ಜೋಸೆಫ್ ಇನ್‌ಸ್ಟಿಟ್ಯೂಟ್ ಆಫ್ ಫಿಲಾಸಫಿ ಕಾಲೇಜನ್ನು ತತ್ವಶಾಸ್ತ್ರ ಉನ್ನತ ಶಿಕ್ಷಣ ಸಂಸ್ಥೆಯಾಗಿ ಘೋಷಿಸಿದ ಪ್ರಮಾಣಪತ್ರವನ್ನು ಬಿಷಪ್ ಪೀಟರ್ ಪಾವ್ಲ್ ಸಲ್ಡಾನ ಪ್ರದರ್ಶಿಸಿದರು
ಸೇಂಟ್‌ ಜೋಸೆಫ್ ಇನ್‌ಸ್ಟಿಟ್ಯೂಟ್ ಆಫ್ ಫಿಲಾಸಫಿ ಕಾಲೇಜನ್ನು ತತ್ವಶಾಸ್ತ್ರ ಉನ್ನತ ಶಿಕ್ಷಣ ಸಂಸ್ಥೆಯಾಗಿ ಘೋಷಿಸಿದ ಪ್ರಮಾಣಪತ್ರವನ್ನು ಬಿಷಪ್ ಪೀಟರ್ ಪಾವ್ಲ್ ಸಲ್ಡಾನ ಪ್ರದರ್ಶಿಸಿದರು   

ಮಂಗಳೂರು: ಜೆಪ್ಪುವಿನ ಸೇಂಟ್ ಜೋಸೆಫ್ ಇನ್‍ಸ್ಟಿಟ್ಯೂಟ್ ಆಫ್ ಫಿಲಾಸಫಿ ಕಾಲೇಜನ್ನು ತತ್ವಶಾಸ್ತ್ರದ ಉನ್ನತ ಶಿಕ್ಷಣ ಸಂಸ್ಥೆಯಾಗಿ ಘೋಷಿಸಲಾಗಿದೆ.

ಗುರುಮಠದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಮಂಗಳೂರಿನ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ, ಬೆಂಗಳೂರಿನ ಧರ್ಮಾರಾಂ ವಿದ್ಯಾ ಕ್ಷೇತ್ರದ ಮ್ಯಾಥ್ಯೂ ಅಟ್ಟುಂಕಲ್ ಸಿಎಂಐ ಮತ್ತು ಇತರ ಗಣ್ಯರ ಉಪಸ್ಥಿತಿಯಲ್ಲಿ ಇದನ್ನು ಅಧಿಕೃತವಾಗಿ ಘೋಷಿಸಲಾಯತು.

ಮ್ಯಾಥ್ಯೂ ಅಟ್ಟುಂಕಲ್, ‘ಐದು ವರ್ಷಗಳ ಅವಧಿಗೆ ಪ್ರಾಯೋಗಿಕವಾಗಿ ಈ ಮನ್ನಣೆ ದೊರೆತಿದೆ. ಈ ಸಂಸ್ಥೆಯಿಂದ ಪಡೆದ ಪದವಿ ಪ್ರಮಾಣ ಪತ್ರ ಅಂತರರಾಷ್ಟ್ರೀಯ ಮಾನ್ಯತೆ ಹೊಂದಿದೆ. ಈ ಉನ್ನತ ಶಿಕ್ಷಣ ಪಡೆಯಲು ಎಲ್ಲರಿಗೂ ಅವಕಾಶ ಇದೆ’ ಎಂದರು.

ADVERTISEMENT

ಜಾರ್ಜ್ ಕುಲಂಕರ ಪರಿಚಯಿಸಿದರು. ರೆಕ್ಟರ್ ರೊನಾಲ್ಡ್ ಸ್ವಾಗತಿಸಿದರು. ಮನೋಜ್ ಮ್ಯಾಥ್ಯೂ ವಂದಿಸಿದರು.

ಸೇಂಟ್ ಜೋಸೆಫ್ ಇನ್‍ಸ್ಟಿಟ್ಯೂಟ್ ಆಫ್ ಫಿಲಾಸಫಿಯ ನಿರ್ದೇಶಕ ಐವನ್ ಡಿಸೋಜ, ಅಲೋಶಿಯಸ್ ಪಾವ್ಲ್ ಡಿ ಸೋಜ, ಜೋಸೆಫ್ ಮಾರ್ಟಿಸ್, ಧರ್ಮಭಗಿನಿ ಲಿಲ್ಲಿ ಪಿರೇರಾ, ರಾಕಿ ಡಿಕುನ್ಹಾ ಇದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.