ADVERTISEMENT

ಬಂಟ್ವಾಳ | ಸಜಿಪಮೂಡ ಪ್ರೌಢಶಾಲೆ: 5 ಜೋಡಿ ಅವಳಿ-ಜವಳಿ ವಿದ್ಯಾರ್ಥಿನಿಯರು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2023, 18:46 IST
Last Updated 7 ಅಕ್ಟೋಬರ್ 2023, 18:46 IST
ಬಂಟ್ವಾಳ ತಾಲ್ಲೂಕಿನ ಸಜಿಪಮೂಡ ಸರ್ಕಾರಿ ಪದವಿಪೂರ್ವ ಕಾಲೇಜಿನ ಎಂಟನೇ ತರಗತಿಯಲ್ಲಿ ಕಲಿಯುತ್ತಿರುವ ಅವಳಿ-ಜವಳಿ ವಿದ್ಯರ್ಥಿನಿಯರು
ಬಂಟ್ವಾಳ ತಾಲ್ಲೂಕಿನ ಸಜಿಪಮೂಡ ಸರ್ಕಾರಿ ಪದವಿಪೂರ್ವ ಕಾಲೇಜಿನ ಎಂಟನೇ ತರಗತಿಯಲ್ಲಿ ಕಲಿಯುತ್ತಿರುವ ಅವಳಿ-ಜವಳಿ ವಿದ್ಯರ್ಥಿನಿಯರು   

ಬಂಟ್ವಾಳ (ದಕ್ಷಿಣ ಕನ್ನಡ): ತಾಲ್ಲೂಕಿನ ಸಜಿಪಮೂಡ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ಎಂಟನೇ ತರಗತಿಯಲ್ಲಿ ಐದು ಜೋಡಿ ಅವಳಿ-ಜವಳಿ ವಿದ್ಯಾರ್ಥಿನಿಯರು ಕಲಿಯುತ್ತಿದ್ದಾರೆ. ಈ ಅವಳಿ-ಜವಳಿ ವಿದ್ಯಾರ್ಥಿನಿಯರು ಇದೇ ಊರಿನ ಬೇರೆ ಬೇರೆ ಕುಟುಂಬಗಳಿಗೆ ಸೇರಿದವರು.

ಆಯಿಷಾ ಝಿಬಾ-ಖತೀಝಾ ಝಿಯಾ, ಶ್ರಣವಿ-ಜಾಹ್ನವಿ, ಫಾತಿಮತ್ ಕಮಿಲ-ಫಾತಿಮತ್ ಸಮಿಲ, ಆಯಿಷಾ ರೈಫಾ- ಫಾತೀಮಾ ರೌಲ, ದುಲೈಕತ್ ರುಫಿದಾ- ಹಲೀಮತ್ ರಾಫಿದ ಒಂದೇ ತರಗತಿಯಲ್ಲಿ ಕಲಿಯುತ್ತಿರುವ ಅವಳಿ- ಜವಳಿ ವಿದ್ಯಾರ್ಥಿನಿಯರು. ಈ ಪ್ರತಿ ಜೋಡಿ ನೋಡುವುದಕ್ಕೆ ಒಂದೇ ತರಹ ಕಾಣಿಸುತ್ತಿದ್ದು, ಇವರನ್ನು ಗುರುತಿಸುವಾಗ ಶಿಕ್ಷಕರು ಹಾಗೂ ಸಹಪಾಠಿಗಳು ಕೆಲವೊಮ್ಮೆ ಗೊಂದಲಕ್ಕೀಡಾಗುತ್ತಿದ್ದಾರೆ.

‘ಈ ಹಿಂದೆ ನಮ್ಮ ಪ್ರೌಢಶಾಲೆಯಲ್ಲಿ ಎಂಟು ಜೋಡಿ ಅವಳಿ-ಜವಳಿ ವಿದ್ಯಾರ್ಥಿಗಳು ಬೇರೆ ಬೇರೆ ತರಗತಿಯಲ್ಲಿ ಕಲಿತಿದ್ದರು’ ಎಂದು ಮುಖ್ಯಾಧ್ಯಾಪಕಿ ಆಲಿಸ್ ಪಾಯಿಸ್ ನೆನಪಿಸಿಕೊಂಡರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.