ADVERTISEMENT

ಉಜಿರೆ: ಕವಿದ ದಟ್ಟ ಮಂಜು, ಚಾರ್ಮಾಡಿ ಘಾಟಿಯಲ್ಲಿ ಸರಣಿ ಅಪಘಾತ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2023, 12:42 IST
Last Updated 9 ಸೆಪ್ಟೆಂಬರ್ 2023, 12:42 IST
ಚಾರ್ಮಾಡಿ ಘಾಟಿಯಲ್ಲಿ ಉರುಳಿ ಬಿದ್ದ ವಾಹನ
ಚಾರ್ಮಾಡಿ ಘಾಟಿಯಲ್ಲಿ ಉರುಳಿ ಬಿದ್ದ ವಾಹನ   

ಉಜಿರೆ: ಚಾರ್ಮಾಡಿ ಘಾಟಿಯಲ್ಲಿ ಮಳೆಯಾಗುತ್ತಿರುವುದರಿಂದ ಹಾಗೂ ದಟ್ಟವಾಗಿ ಮಂಜು ಕವಿದಿದ್ದರಿಂದ ಸರಣಿ ಅಪಘಾತಗಳು ನಡೆದಿವೆ.

ಚಾರ್ಮಾಡಿ ಘಾಟಿಯಲ್ಲಿರುವ ಅಣ್ಣಪ್ಪ ಸ್ವಾಮಿ ಗುಡಿಯಿಂದ ಅನತಿ ದೂರದಲ್ಲಿ ಹುಬ್ಬಳ್ಳಿಯಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಬಸ್ ಮತ್ತು ಧರ್ಮಸ್ಥಳದಿಂದ ಧಾರವಾಡಕ್ಕೆ ಹೋಗುತ್ತಿದ್ದ ಕಾರಿನ ಮಧ್ಯೆ ಅಪಘಾತ ನಡೆದಿದೆ. ಘಟನೆಯಲ್ಲಿ ತಡೆಗೋಡೆಯೂ ಕುಸಿದಿದ್ದು, ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಬಿದಿರುತಳ ಬಸ್ ತಂಗುದಾಣದ ಬಳಿ ಮಂಗಳೂರು ಕಡೆ ಬರುತ್ತಿದ್ದ ಬೊಲೆರೊ ವಾಹನ ತಡೆಗೋಡೆಗೆ ಹತ್ತಿ ಉರುಳಿದ್ದು, ವಾಹನದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ADVERTISEMENT

ತಡೆಗೋಡೆ ಕುಸಿತದಿಂದ ಇನ್ನಷ್ಟು ಅಪಘಾತಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಹೆದ್ದಾರಿ ಪ್ರಾಧಿಕಾರ ತಕ್ಷಣ ತಡೆಗೋಡೆ ದುರಸ್ತಿ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಾರಾಂತ್ಯ ವಾಹನಗಳ ಸಂಚಾರ ದಟ್ಟಣೆಯೂ ಹೆಚ್ಚಾಗಿದೆ. ಶನಿವಾರ ಮುಂಜಾನೆ ಚಾರ್ಮಾಡಿ ಘಾಟಿ ರಸ್ತೆಯ ಒಂದನೇ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ರಸ್ತೆಗೆ ಉರುಳಿ ಬಿದ್ದಿದೆ.

ಚಾರ್ಮಾಡಿ ಘಾಟಿಯಲ್ಲಿ ಉರುಳಿ ಬಿದ್ದ ವಾಹನ
ಚಾರ್ಮಾಡಿ ಘಾಟಿಯಲ್ಲಿ ಉರುಳಿ ಬಿದ್ದ ವಾಹನ
ಚಾರ್ಮಾಡಿ ಘಾಟಿಯಲ್ಲಿ ಕುಸಿದುಬಿಡ್ಡ ತಡೆಗೋಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.