ADVERTISEMENT

ಶಾರದಾ ಆಸ್ಪತ್ರೆಯಲ್ಲಿ 3 ಘಟಕಗಳ ಉದ್ಘಾಟನೆ ನಾಳೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 4:49 IST
Last Updated 23 ಅಕ್ಟೋಬರ್ 2024, 4:49 IST
ಸುದ್ದಿಗೋಷ್ಠಿಯಲ್ಲಿ ಎಂ.ಬಿ.ಪುರಾಣಿಕ್ ಮಾತನಾಡಿದರು
ಸುದ್ದಿಗೋಷ್ಠಿಯಲ್ಲಿ ಎಂ.ಬಿ.ಪುರಾಣಿಕ್ ಮಾತನಾಡಿದರು   

ಮಂಗಳೂರು: ರಾಷ್ಟ್ರೀಯ ಆಯುರ್ವೇದ ದಿನದ ಅಂಗವಾಗಿ ಶಾರದಾ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮೂರು ಹೊಸ ಘಟಕಗಳನ್ನು ಪ್ರಾರಂಭಿಸಲಾಗಿದ್ದು, ಇವುಗಳ ಉದ್ಘಾಟನೆ ಅ.24ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ಆಸ್ಪತ್ರೆಯ ಸಭಾಭವನದಲ್ಲಿ ನಡೆಯಲಿದೆ ಎಂದು ಶಾರದಾ ಸಮೂಹ ಸಂಸ್ಥೆಯ ಅಧ್ಯಕ್ಷ ಎಂ.ಬಿ. ಪುರಾಣಿಕ್ ಹೇಳಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಬೆನ್ನುಹುರಿ ಮತ್ತು ಸಂದು ಸಮಸ್ಯೆಗೆ ಸಂಬಂಧಿಸಿ ‘ಗಮನ’, ಕ್ಯಾನ್ಸರ್ ಪೂರಕ ಚಿಕಿತ್ಸೆ ನೀಡಲು ‘ಅಂಕುರ’, ಚರ್ಮದ ಅಲರ್ಜಿ, ತುರಿಕೆ, ಜೇಡ, ಜೇನು ನೊಣ ಇತ್ಯಾದಿ ಕೀಟಗಳ ಕಡಿತ ಉಂಟಾಗುವ ವಿಷದ ಚಿಕಿತ್ಸೆಗೆ ‘ನಿರ್ವಿಷ’ ಹೀಗೆ ಮೂರು ವಿಭಾಗಗಳಲ್ಲಿ ಚಿಕಿತ್ಸೆ ಪ್ರಾರಂಭಿಸಲಾಗುತ್ತದೆ’ ಎಂದರು.

ಅ.24ರಿಂಧ 30ರವರೆಗೆ ಬೆಳಿಗ್ಗೆ 9ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಉಚಿತ ತಪಾಸಣೆ, ಚಿಕಿತ್ಸಾ ಶಿಬಿರ ನಡೆಯಲಿದೆ. ಅ.26ರಂದು ಮೂಳೆ ಸಾಂದ್ರತೆ ಉಚಿತ ತಪಾಸಣೆ ಶಿಬಿರ ನಡೆಯುತ್ತದೆ. ಅ.29ರಂದು ವಿಶೇಷ ಆಹಾರ ಮೇಳ, ‘ಸ್ವಾಸ್ಥ್ಯ ರುಚಿ’ ಅಡುಗೆ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. 20 ವರ್ಷದಿಂದ 60 ವರ್ಷದೊಳಗಿನ ಯಾರು ಬೇಕಾದರೂ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ಹೇಳಿದರು.

ADVERTISEMENT

ತುಳುನಾಡು ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಪ್ರದೀಪಕುಮಾರ್ ಕಲ್ಕೂರ, ಪ್ರಾಂಶುಪಾಲ ಡಾ.ಸಂದೀಪ್ ಬೇಕಲ್, ಡಾ. ಶ್ಯಾಮಪ್ರಸಾದ್, ವ್ಯವಸ್ಥಾಪಕ ಹರ್ಷಿತ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.