ADVERTISEMENT

ಬಿಜೆಪಿ ಸೇವಾ ಯೋಜನೆ ‘ಸ್ಪಂದನೆ’ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 14:01 IST
Last Updated 28 ಅಕ್ಟೋಬರ್ 2024, 14:01 IST
ಶಾಸಕ ಡಾ.ಭರತ್‌ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು
ಶಾಸಕ ಡಾ.ಭರತ್‌ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು   

ಬಜಪೆ: ಬಿಜೆಪಿ ಕಾರ್ಯಕರ್ತರಿಗೆ ಕಾರ್ಯಕರ್ತರು ಮಾಡುವ ಸೇವೆಯಾದ ‘ಸ್ಪಂದನೆ ಸೇವಾ ಯೋಜನೆ’ಗೆ ಹಿರಿಯ ಕಾರ್ಯಕರ್ತ ಮಾಧವ ಶೆಟ್ಟಿಗಾರ ಅವರ ಮನೆಯಲ್ಲಿ ಚಾಲನೆ ನೀಡಲಾಯಿತು.

ಮಂಗಳೂರು ನಗರ ಉತ್ತರ ಶಾಸಕ ಡಾ.ಭರತ್ ಶೆಟ್ಟಿ, ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ರಾಜೇಶ್ ಕೊಟ್ಟಾರಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ಯೋಜನೆಯ ಪ್ರಮುಖರಾದ ಅಜಿತ್ ಶೆಟ್ಟಿ ಅವರು ಮಾಹಿತಿ ನೀಡಿದರು.

ADVERTISEMENT

ಅನಾರೋಗ್ಯದಿಂದ ಬಳಲುತ್ತಿರುವ ಮಾಧವ ಶೆಟ್ಟಿಗಾರ ಅವರ ಆರೋಗ್ಯ ವಿಚಾರಿಸಿದ ಶಾಸಕ ಡಾ.ಭರತ್ ಶೆಟ್ಟಿ ಅವರು ಯೋಜನೆಯ ಧನ ಸಹಾಯ ಮಾಡಿದರು.

ಸಂಚಾಲಕ ಪ್ರಸನ್ನ ಚೌಟ, ಪ್ರಮುಖರಾದ ಗೋಕುಲದಾಸ್ ಶೆಟ್ಟಿ, ಕಮಲಾಕ್ಷ ತಲ್ಲಿಮಾರು, ಸುಧೀರ್ ಕಾಮತ್ ಗುರುಪುರ, ಸೋಹನ್ ಅತಿಕಾರಿ, ಕಿಶೋರ್ ಉಗ್ಗರಕೋಡಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.