ವಿಟ್ಲ: ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಚಿನ್ಮಯಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 624 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ.
ಈಕೆ ವಿಟ್ಲ ಕಸಬಾ ಗ್ರಾಮದ ಕೂಡೂರು ನಿವಾಸಿ ರಾಜನಾರಾಯಣ ಹಾಗೂ ಗೀತಾ ದಂಪತಿಗಳ ಪುತ್ರಿ. ಈಕೆಗೆ ಗಣಿತ ವಿಷಯದಲ್ಲಿ 99 ಅಂಕ ಪಡೆದಿದ್ದು, ಇನ್ನುಳಿದ ಎಲ್ಲಾ ವಿಷಯದಲ್ಲಿ ತಲಾ 100 ಅಂಕಗಳನ್ನು ಪಡೆದಿದ್ದಾಳೆ. ಈಕೆ ತಂದೆಯೂ ಕೂಡ ಪದವಿದಾರರಾಗಿದ್ದಾರೆ.
ಮುಂದೆ ಪಿಎಚ್.ಡಿಮಾಡಿ ಸಂಶೋಧನೆಯಲ್ಲಿ ಮುಂದುವರಿಯುವಗುರಿ ಇಟ್ಟುಕೊಂಡಿದ್ದೇನೆ ಎಂದು ಚಿನ್ಮಯಿ ಪ್ರಜಾವಾಣಿಗೆ ತಿಳಿಸಿದಳು.
ಪ್ರತಿದಿನ ಮಾಡುತ್ತಿದ್ದ ಪಾಠವನ್ನು ಅದೇ ದಿನ ಗಮನ ಇಟ್ಟು ಓದುತ್ತಿದ್ದೆ. ಎಲ್ಲಾ ವಿಷಯಕ್ಕೂ ಒಂದೇ ರೀತಿ ಗಮನ ಕೊಡುತ್ತಿದ್ದು, ಜೇಸಿಸ್ ಶಾಲೆಯ ಶಿಕ್ಷಕರ ಸಂಪೂರ್ಣ ಸಹಕಾರ ಹಾಗೂ ಮಾರ್ಗದರ್ಶನದಿಂದಾಗಿ ಇಂದು ಉತ್ತಮ ಅಂಕ ಪಡೆಯಲು ಸಾಧ್ಯವಾಗಿದೆ. ಗಣಿತ ವಿಷಯ ನನ್ನ ಇಷ್ಟದ ವಿಷಯವಾಗಿದ್ದು, ಅದರಲ್ಲಿ ಒಂದು ಅಂಕ ಕಡಿಮೆ ಬಂದಿದ್ದು, ಬೇಸರ ಉಂಟು ಮಾಡಿದೆ ಎಂದು ಚಿನ್ಮಯಿ ಅಭಿಪ್ರಾಐ ಹಂಚಿಕೊಂಡಿದ್ದಾಳೆ.
ವಿದ್ಯಾರ್ಥಿನಿಯ ಸಾಧನೆ ಬಗ್ಗೆ ಶಾಲಾ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಸಂತಸ ವ್ಯಕ್ತಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.