ADVERTISEMENT

ಬಜಪೆ | ‘ವಿದ್ಯಾರ್ಥಿಗಲ್ಲಿ ನಾಯಕತ್ವ, ಮಾನವೀಯ ಮೌಲ್ಯ ಅಗತ್ಯ’

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 14:18 IST
Last Updated 25 ಜೂನ್ 2024, 14:18 IST
ಬಜಪೆ ಸೇಂಟ್‌ ಜೋಸೆಪ್ಸ್ ಪಿಯು ಕಾಲೇಜಿನ ಸಂಚಾಲಕ ಫಾ.ರೋನಾಲ್ಡ್ ಕುಟಿನ್ಹ ಕಾರ್ಯಕ್ರಮ ಉದ್ಘಾಟಿಸಿದರು
ಬಜಪೆ ಸೇಂಟ್‌ ಜೋಸೆಪ್ಸ್ ಪಿಯು ಕಾಲೇಜಿನ ಸಂಚಾಲಕ ಫಾ.ರೋನಾಲ್ಡ್ ಕುಟಿನ್ಹ ಕಾರ್ಯಕ್ರಮ ಉದ್ಘಾಟಿಸಿದರು   

ಬಜಪೆ: ವಿದ್ಯಾರ್ಥಿಗಳು ನಾಯಕತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಬಜಪೆ ಸೇಂಟ್‌ ಜೋಸೆಫ್ಸ್‌ ಪಿ.ಯು ಕಾಲೇಜಿನ ಸಂಚಾಲಕ ಫಾ.ರೋನಾಲ್ಡ್ ಕುಟಿನ್ಹ ಹೇಳಿದರು.

ಬಜಪೆ ಸಂತ ಜೋಸೆಫರ ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗದ 2024- 25ನೇ ಶೈಕ್ಷಣಿಕ ಸಾಲಿನ ವಿವಿಧ ಸಂಘಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಲಾ ಮುಖ್ಯಶಿಕ್ಷಕ ಆಲ್ವಿನ್ ನೊರೊನ್ಹಾ ಪ್ರತಿಜ್ಞಾ ವಿಧಿ ಬೋಧಿಸಿದರು. ಶಾಲಾ ನಾಯಕಿ ರೀಝಾ ಎಲಿಶಾ ಪಿಂಟೊ, ಉಪನಾಯಕ ಇಯಾನ್ ರೆನ್ವಿಲ್ ಮಥಾಯಸ್‌, ಹಿರಿಯ ಶಿಕ್ಷಕಿ ಶಿಲ್ಪಾ ಡಿಸೋಜ ಭಾಗವಹಿಸಿದ್ದರು.

ADVERTISEMENT

ವಿದ್ಯಾರ್ಥಿನಿ ಯುಕ್ತಿ ಸ್ವಾಗತಿಸಿ, ಅಡ್ರಿಲ್ ಸಿಕ್ವೇರಾ ವಂದಿಸಿದರು. ಮತದಾರರ ಸಾಕ್ಷರತಾ ಸಂಘದ ಸಂಯೋಜಕ ಅಶ್ವತ್ಥ್‌ ನಿಡ್ಡೋಡಿ ಕಾರ್ಯಕ್ರಮ ನಿರೂಪಿಸಿದರು.

ಬಜಪೆ ಸೇಂಟ್‌ ಜೋಸೆಪ್ಸ್ ಪಿಯು ಕಾಲೇಜಿನ ಸಂಚಾಲಕ ಫಾ.ರೋನಾಲ್ಡ್ ಕುಟಿನ್ಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.