ಪಡುಬಿದ್ರಿ: ತೌತೆ ಚಂಡಮಾರುತಕ್ಕೆ ಸಿಲುಕಿ ಪಡುಬಿದ್ರಿಯ ಸಮುದ್ರ ತೀರದಲ್ಲಿ ಪತ್ತೆಯಾದ ಅಲಯನ್ಸ್ ಟಗ್ ಅನ್ನು ಮೇಲೆತ್ತುವ ಕಾರ್ಯಾಚರಣೆ ಯಶಸ್ವಿಯಾಗಿದೆ.
ಮಂಗಳೂರು ಬೇಂಗರೆ ಬದ್ರಿಯಾ ಹಾಗೂ ಮಂಗಳೂರಿನ ಯೋಜಕ ಕಂಪನಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿದೆ.
ಎನ್ಎಂಪಿಟಿ ಯಲ್ಲಿ ಎಂಆರ್ ಪಿಎಲ್‌ಗೆ ಸೇರೀದ ಈ ಟಗ್ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿತ್ತು. ಈ ಟಗ್ ತೌತೆ ಚಂಡಮಾರುತಕ್ಕೆ ಸಿಲುಕಿ ಪಡುಬಿದ್ರಿ ಸಮುದ್ರ ತೀರದಲ್ಲಿ ಪತ್ತೆಯಾಗಿತ್ತು. ಟಗ್ ನಲ್ಲಿದ್ದ ಇಬ್ಬರ ಮೃತದೇಹ ಅದೇ ದಿನ ಪತ್ತೆಯಾಗಿತ್ತು. ಮೂವರು ಈಜಿ ದಡ ಸೇರಿದ್ದರು. ಮೂವರು ನಾಪತ್ತೆ ಆಗಿದ್ದರು. ಈ ಪೈಕಿ ಇಬ್ಬರ ಮೃತ ದೇಹ ಪತ್ತೆಯಾಗಿದ್ದು, ಇನ್ನೊಂದು ಮೃತ ದೇಹ ಶೋಧ ಕಾರ್ಯಾಚರಣೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.