ADVERTISEMENT

ಮಂಗಳೂರು: ಮೂರು ಟೋಲ್‌ಗಳ ದರ ಪರಿಷ್ಕರಣೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2023, 16:19 IST
Last Updated 31 ಮಾರ್ಚ್ 2023, 16:19 IST

ಮಂಗಳೂರು: ತಲಪಾಡಿ, ಹೆಜಮಾಡಿ ಮತ್ತು ಗುಂಡ್ಮಿಯಲ್ಲಿರುವ ಮೂರು ಟೋಲ್ ಗೇಟ್‌ಗಳಲ್ಲಿ ಏಪ್ರಿಲ್ 1ರಿಂದ ಟೋಲ್ ಶುಲ್ಕವನ್ನು ಪರಿಷ್ಕರಿಸಲಾಗಿದೆ ಎಂದು ನವಯುಗ ಉಡುಪಿ ಟೋಲ್‌ವೇ ಪ್ರೈವೇಟ್ ಲಿಮಿಟೆಡ್ ತಿಳಿಸಿದೆ.

ಗುಂಡ್ಮಿ ಟೋಲ್ ಪ್ಲಾಜಾ: ಕಾರು, ಜೀಪ್ ವ್ಯಾನ್ ಅಥವಾ ಲಘು ವಾಹನಗಳ ಗುಂಡ್ಮಿ ಟೋಲ್ ಪ್ಲಾಜಾದ ಏಕಮುಖ ಸಂಚಾರಕ್ಕೆ ₹60 ಮತ್ತು ₹85 (ಅದೇ ದಿನ ಹಿಂತಿರುಗಿದರೆ), ಮಾಸಿಕ ಪಾಸ್ ತಿಂಗಳಿಗೆ ಗರಿಷ್ಠ 50 ಬಾರಿಗೆ ₹1,930, ಎಲ್‌ಸಿವಿ ಮತ್ತು ಮಿನಿ ಬಸ್‌ಗಳಿಗೆ ಏಕಮುಖ ಸಂಚಾರ ದರ ₹95 ಮತ್ತು ಒಂದೇ ದಿನದ ರಿಟರ್ನ್‌ಗೆ ₹140, ಮಾಸಿಕ ಪಾಸ್ ₹3,120, ಬಸ್‌ ಮತ್ತು ಟ್ರಕ್‌ಗಳಿಗೆ ಏಕಮುಖ ಸಂಚಾರ ₹195 ಮತ್ತು ಅದೇ ದಿನ ಮರಳಿ ಬಂದರೆ ₹295 ಮಾಸಿಕ ಪಾಸ್‌ನ ಬೆಲೆ ₹6,540 ಆಗಿದೆ.

ಹೆಜಮಾಡಿ ಟೋಲ್ ಪ್ಲಾಜಾ: ಕಾರು, ಜೀಪ್, ವ್ಯಾನ್ ಅಥವಾ ಲಘು ವಾಹನಗಳಿಗೆ ₹50 (ಒನ್-ವೇ) ಮತ್ತು ₹75 (ಅದೇ ದಿನ ಹಿಂತಿರುಗಿದರೆ), ಮಾಸಿಕ ಪಾಸ್ ಒಂದು ತಿಂಗಳಲ್ಲಿ ಗರಿಷ್ಠ 50 ಬಾರಿಗೆ ₹1,640, ಎಲ್‌ಸಿವಿ ಮತ್ತು ಮಿನಿ ಬಸ್‌ಗಳಿಗೆ ಒಂದು ಮಾರ್ಗದ ದರ ₹80 ಮತ್ತುಅದೇ ದಿನ ಮರಳಿ ಬಂದರೆ ₹120, ಮಾಸಿಕ ಪಾಸ್ ₹2,655, ಬಸ್‌ ಮತ್ತು ಟ್ರಕ್‌ಗಳಿಗೆ ₹165 ಮತ್ತು ಅದೇ ದಿನ ಮರಳಿದರೆ ₹250, ಮಾಸಿಕ ಪಾಸ್ ಬೆಲೆ ₹5,560 ಆಗಿದೆ.

ADVERTISEMENT

ತಲಪಾಡಿ ಟೋಲ್ ಪ್ಲಾಜಾ: ಕಾರು, ಜೀಪ್ ವ್ಯಾನ್ ಅಥವಾ ಲಘು ವಾಹನಗಳಿಗೆ ₹50 (ಒನ್-ವೇ) ಮತ್ತು ₹75 (ಅದೇ ದಿನ ಹಿಂದಿರುಗಿದರೆ), ಮಾಸಿಕ ಪಾಸ್ ಒಂದು ತಿಂಗಳಲ್ಲಿ ಗರಿಷ್ಠ 50 ಬಾರಿಗೆ ₹1720, ಎಲ್‌ಸಿವಿ ಮತ್ತು ಮಿನಿ ಬಸ್‌ಗಳಿಗೆ ಒಂದು ಮಾರ್ಗದ ದರ ₹80, ಅದೇ ದಿನ ಮರಳಿದರೆ ₹120, ಮಾಸಿಕ ಪಾಸ್ ₹2,655, ಬಸ್‌ ಮತ್ತು ಟ್ರಕ್‌ಗಳಿಗೆ ₹165 ಮತ್ತು ಅದೇ ದಿನ ಮರಳಿದರೆ ₹ 245, ಮಾಸಿಕ ಪಾಸ್ ಬೆಲೆ ₹5,420 ಆಗಿದೆ.

2023-24ನೇ ಸಾಲಿನ ಅವಧಿಗೆ ಎಲ್ಲ ಮೂರು ಟೋಲ್ ಪ್ಲಾಜಾದಿಂದ 20 ಕಿ.ಮೀ ಅಂತರದಲ್ಲಿ ವಾಸಿಸುವ ಸ್ಥಳೀಯ ವಾಣಿಜ್ಯೇತರ ವಾಹನಗಳಿಗೆ ಅನ್ವಯವಾಗುವ ಮಾಸಿಕ ಪಾಸಿನ ದರಗಳು ಪ್ರತಿ ಟೋಲ್ ಪ್ಲಾಜಾಕ್ಕೆ ತಿಂಗಳಿಗೆ ₹330 ಆಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.