ಉಳ್ಳಾಲ: ಉಳ್ಳಾಲಬೈಲಿನ ಮನೆಯೊಂದರ ಬಾಲ್ಕನಿ, ಟೆರೇಸ್ ಹಾಗೂ ಮನೆಯಂಗಳದಲ್ಲಿ ಒಣಗಲು ಹಾಕಿದ್ದ ಮಹಿಳೆಯರ ಸಲ್ವಾರ್ ಹಾಗೂ ಒಳ ಉಡುಪುಗಳನ್ನು ಸೋಮವಾರ ರಾತ್ರಿ ಕಳವು ಮಾಡಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾದ ಕಿಡಿಗೇಡಿಗಳು ಮನೆ ಬಾಗಿಲ ಚಿಲಕಕ್ಕೆ ಕಾಂಡೋಮ್ ಸಿಕ್ಕಿಸಿ ವಿಕೃತಿ ಮೆರೆದಿದ್ದಾರೆ.
ಉಳ್ಳಾಲಬೈಲಿನ ಗೇರು ಕೃಷಿ ಸಂಶೋಧನಾ ಕೇಂದ್ರದ ಬಳಿಯ ಮನೆಯಲ್ಲಿ ಬಾಡಿಗೆಗೆ ಇದ್ದ ಕುಟುಂಬದ ಮಹಿಳೆ ಮತ್ತು ಆಕೆಯ ಮಗಳ ಬೆಲೆ ಬಾಳುವ ಸಲ್ವಾರ್, ಮತ್ತು ಒಳ ಉಡುಪುಗಳು ಕಳವಾಗಿವೆ. ಮನೆಯ ಯಜಮಾನರು ಮಂಗಳವಾರ ಬೆಳಿಗ್ಗೆ ಎದ್ದು ನೋಡಿದಾಗ ಬಾಗಿಲಿನ ಚಿಲಕದಲ್ಲಿ ಕಾಂಡೋಮ್ ಕಂಡುಬಂದಿತ್ತು. ಮಹಿಳೆಯರ ಉಡುಪುಗಳು ಕಳವಾಗಿರುವುದು ನಂತರ ಗೊತ್ತಾಗಿತ್ತು.
ಬಾಡಿಗೆ ಮನೆಯ ಯಜಮಾನರ ಅಂಗಿ, ಟಿ– ಶರ್ಟ್, ಪ್ಯಾಂಟ್‌ಗಳನ್ನು ಕೂಡಾ ಮನೆಯ ಹೊರಗಡೆ ಒಣಗಲು ಹಾಕಲಾಗಿತ್ತು. ಅವುಗಳನ್ನು ಬಿಟ್ಟು ಹೋಗಿದ್ದಾರೆ. ಪಕ್ಕದ ಮನೆಯ ಮಹಿಳೆಯರ ಉಡುಪುಗಳನ್ನು ಹಾಗೂ ಒಳ ಉಡುಪುಗಳನ್ನೂ ಕದ್ದೊಯ್ಯಲಾಗಿದೆ.
ಕಳವಾದ ಉಡುಪಿಗಳ ಮೌಲ್ಯ ₹ 7 ಸಾವಿರ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದೆ.
‘ವಿಕೃತ ವ್ಯಕ್ತಿಗಳೇ ಈ ಕೃತ್ಯ ನಡೆಸಿರುವ ಸಾಧ್ಯತೆ ಇದೆ’ ಎಂದು ಪೊಲೀಸರು ಶಂಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.