ಮಂಗಳೂರು: ‘ಶ್ರಮಪಟ್ಟರೆ ಗ್ರಾಮೀಣ ಪ್ರತಿಭೆಗಳು ಕೂಡ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯ. ಅದಕ್ಕಾಗಿ ಕಾಲೇಜಿನಲ್ಲಿ ಸಿಗುವ ಅವಕಾಶಗಳನ್ನು ಬಳಕೆ ಮಾಡಿಕೊಳ್ಳಿ’ ಎಂದು ವಿಶ್ವವಿದ್ಯಾನಿಲಯ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ದಯಾಕರ್ ಬಿ. ಸಲಹೆ ನೀಡಿದರು.
ಕಾಲೇಜಿನ ಕ್ರೀಡಾ ವಿಭಾಗ ಮತ್ತು ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ನಡೆದ ‘ಯೂನಿವರ್ಸಿಟಿ ಪ್ರೀಮಿಯರ್ ಲೀಗ್– ಸೀಸನ್ 6ರ ಸಮಾರೋಪದಲ್ಲಿ ಅವರು ಮಾತನಾಡಿದರು. ಎಂಟು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಯುಸಿಎಂ ಜಾಗ್ವಾರ್ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಯುಸಿಎಂ ರಾಯಲ್ಸ್ ತಂಡ ರನ್ನರ್ ಆಗಿ ಹೊರಹೊಮ್ಮಿದರೆ, ಮಹಿಳೆಯರ ತಂಡದಲ್ಲಿ ಯುಸಿಎಂ ರೇಂಜರ್ಸ್ ತಂಡ ಗೆಲವು ಸಾಧಿಸಿತು.
ಯುಸಿಎಂ ಜಾಗ್ವಾರ್ ತಂಡದ ಅನಿಲ್ ಟೂರ್ನಿ ಶ್ರೇಷ್ಠ, ತೃತೀಯ ಬಿಎ ವಿದ್ಯಾರ್ಥಿ ಸುದೀಪ್ ಸರಣಿ ಶ್ರೇಷ್ಠ, ನವ್ಯ ಸಿ ಅಲಿ ಅಮೂಲ್ಯ ಆಟಗಾರ, ಮರ್ಷದ್ ಉತ್ತಮ ಬೌಲರ್, ಅಖಿಲ್ ಉತ್ತಮ ಬ್ಯಾಟ್ಸ್‌ಮನ್ ಹಾಗೂ ಅಜಯ್ ಉತ್ತಮ ಕ್ಷೇತ್ರ ನಿರ್ವಹಣೆ ಪ್ರಶಸ್ತಿ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.