ಮೂಲ್ಕಿ: ನವರಾತ್ರಿ ಸಂದರ್ಭದಲ್ಲಿ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಿನಿಮಾ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖರು ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡರು.
ಸಿನಿಮಾ ನಟರಾದ ಸಂಜಯ್ ದತ್ತ್, ಶ್ರೀಮುರಳಿ ಭೇಟಿ ನೀಡಿದರು.
ಕಟೀಲು ದುರ್ಗಾಪರಮೇಶ್ವರಿ ದೇವಳದಲ್ಲಿ ಶನಿವಾರ ರಾತ್ರಿ ಮಹಾನವರಾತ್ರಿ ಪ್ರಯುಕ್ತ ಸುಮಾರು 500 ಆರತಿಗಳಿಂದ ಎರಡು ಗಂಟೆ ಮಹಾರಂಗಪೂಜೆ ನಡೆಯಿತು.
ಪೂಜೆಯ ಬಳಿಕ ಭಕ್ತರಿಗೆ ಮೂಡೆಪ್ರಸಾದವನ್ನು ವಿತರಿಸಲಾಯಿತು.
ಕಳೆದ ಎರಡೂ ದಿನಗಳಲ್ಲಿ ಎರಡು ಸಾವಿರಕ್ಕು ಹೆಚ್ಚು ವಾಹನಗಳಿಗೆ ಪೂಜೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.