ಉಜಿರೆ: ಕೊಕ್ಕಡ ಹೋಬಳಿಯಿಂದ ಬಂದಾರು, ಬೆಳ್ತಂಗಡಿ, ಉಜಿರೆ ಮತ್ತು ಉಪ್ಪಿನಂಗಡಿ ಸಂಪರ್ಕಿಸುವ ರಸ್ತೆಯ ಮೈಪಾಲ ಎಂಬಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟೆಯ ಕಾಮಗಾರಿಯನ್ನು ಶಾಸಕ ಹರೀಶ್ ಪೂಂಜ ಶನಿವಾರ ಪರಿಶೀಲನೆ ನಡೆಸಿದರು.
ಕೊಕ್ಕಡದ ಕುಶಾಲಪ್ಪ ಗೌಡ, ಗ್ರಾಮ ಪಂಚಾಯಿತಿ ಸದಸ್ಯ ಯೋಗೀಶ್ ಆಲಂಬಿಲ, ಬಂದಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಗೌಡ, ಕೃಷ್ಣಯ್ಯ ಆಚಾರ್ಯ, ಮಹಾಬಲ ಗೌಡ, ಉಮೇಶ ಗೌಡ ಜತೆಗಿದ್ದರು.
ನೀರಿನ ಕೊರತೆ ನೀಗಿಸಲು ಬಂದಾರು ಗ್ರಾಮ ಪಂಚಾಯಿತಿಯ ಮೈಪಾಲ ಎಂಬಲ್ಲಿ ₹72 ಕೋಟಿ ವೆಚ್ಚದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣವಾಗುತ್ತಿದ್ದು, ಸದ್ಯದಲ್ಲೇ ಪೂರ್ಣಗೊಳ್ಳಲಿದೆ. ಸೇತುವೆಯಿಂದ ಬಂದಾರು, ಮೊಗ್ರು, ಇಳಂತಿಲ, ಬೆಳಾಲು, ಕಣಿಯೂರು ಗ್ರಾಮಗಳ ಸಂಪರ್ಕಕ್ಕೂ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.