ADVERTISEMENT

ಯಕ್ಷಗಾನ ಸೇವೆಯಿಂದ ಆರಾಧನೆ: ಸುರೇಶ್ ಬಂಗೇರ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 14:43 IST
Last Updated 13 ಜೂನ್ 2024, 14:43 IST
ಮೂಲ್ಕಿ ಬಳಿಯ ಕೆರೆಕಾಡು ವಿನಾಯಕ ಯಕ್ಷಕಲಾ ಫೌಂಡೇಷನ್‌ನ ಚಿಕ್ಕ ಮೇಳದ ತಿರುಗಾಟಕ್ಕೆ ಚಾಲನೆ ನೀಡಲಾಯಿತು
ಮೂಲ್ಕಿ ಬಳಿಯ ಕೆರೆಕಾಡು ವಿನಾಯಕ ಯಕ್ಷಕಲಾ ಫೌಂಡೇಷನ್‌ನ ಚಿಕ್ಕ ಮೇಳದ ತಿರುಗಾಟಕ್ಕೆ ಚಾಲನೆ ನೀಡಲಾಯಿತು   

ಮೂಲ್ಕಿ: ಸೇವೆಯ ಮೂಲಕ ಆರಾಧನೆ ನಡೆಸುವ ಯಕ್ಷಗಾನ ಕಲೆಯನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಪೋಷಿಸಬೇಕು ಎಂದು ಸಸಿಹಿತ್ಲು ಭಗವತಿ ತಿಯಾ ಸಮಾಜ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬಂಗೇರ ಹೇಳಿದರು.

ಮೂಲ್ಕಿ ಬಳಿಯ ಕೆರೆಕಾಡು ಶ್ರೀವಿನಾಯಕ ಯಕ್ಷಕಲಾ ಫೌಂಡೇಷನ್‌ನ ಸಂಯೋಜನೆಯಲ್ಲಿ ಸಂಚಾರಿ ಚಿಕ್ಕ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೆರೆಕಾಡು ವಿನಾಯಕ ಯಕ್ಷಕಲಾ ಫೌಂಡೇಷನ್‌ ಅಧ್ಯಕ್ಷ ಜಯಂತ ಅಮೀನ್ ಅಧ್ಯಕ್ಷತೆ ವಹಿಸಿದ್ದರು.

ADVERTISEMENT

ಯಕ್ಷ ಗುರು ಅಜಿತ್ ಕೆರೆಕಾಡು, ಅಭಿಜಿತ್ ಕೆರೆಕಾಡು, ದುರ್ಗಾಪ್ರಸಾದ್‌, ಪ್ರೇಮಲತಾ, ಅನ್ವಿತಾ, ಲೋಹಿತ್, ನೀಲೇಶ, ಶಶಾಂಕ್, ಫೌಂಡೇಷನ್‌ನ ಗೌರವ ಪ್ರಧಾನ ಕಾರ್ಯದರ್ಶಿ ರೇಷ್ಮಾ ಗಣೇಶ ಬಂಗೇರ, ಅಶೋಕ್ ಕೆ., ಸಾಂಸ್ಕೃತಿಕ ಕಾರ್ಯದರ್ಶಿಗಳಾದ ವಾಣಿ, ಮೂಕಾಂಬಿಕಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.