ಕಾಸರಗೋಡು: ಮಧೂರಿನ ಯಕ್ಷಕಲಾ ಕೌಸ್ತುಭ ಸಂಘಟನೆಯ ದ್ವಿತೀಯ ವಾರ್ಷಿಕ ಸಮಾರಂಭ ಮತ್ತು ಯಕ್ಷಗಾನ ಪ್ರದರ್ಶನ ಪರಕ್ಕಿಲ ಮಹಾದೇವ ಶಾಸ್ತಾರ ವಿನಾಯಕ ದೇವಾಲಯದ ನಟರಾಜ ಸಭಾಮಂಟಪದಲ್ಲಿ ಜರಗಿತು.
ಮಧೂರು ಮದನಂತೇಶ್ವರ ವಿನಾಯಕ ದೇವಾಲಯದ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ ಕಾರ್ಯಕ್ರಮ ಉದ್ಘಾಟಿಸಿದರು.
ಉಳಿಯತ್ತಾಯ ವಿಷ್ಣು ಆಸ್ರ ಅಧ್ಯಕ್ಷತೆ ವಹಿಸಿದ್ದರು. ಕಲಾವಿದ ಸುಂದರ ಕೃಷ್ಣ ಮಧೂರು ಅವರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ಬೆಂಗಳೂರಿನ ಕೃಷ್ಣಪ್ರಸಾದ ತುಂಗ, ರಂಗಕರ್ಮಿ ಉಮೇಶ್ ಎಂ.ಸಾಲ್ಯಾನ್, ನೃತ್ಯ ವಿದುಷಿ ಅನುಪಮಾ ರಾಘವೇಂದ್ರ, ಪತ್ರಕರ್ತ ವೀಜಿ ಕಾಸರಗೋಡು ಇದ್ದರು.
ವಾಸುದೇವ ರಂಗಾಭಟ್ ಮಧೂರು ಕಾರ್ಯಕ್ರಮ ನಿರೂಪಿಸಿದರು. ಗುರುಪ್ರಸಾದ್ ಅಗ್ಗಿತ್ತಾಯ ಸ್ವಾಗತಿಸಿದರು. ‘ಕೊಲ್ಲೂರು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.