ಮಂಗಳೂರು: ಯೇನೆಪೋಯ ಡೀಮ್ಡ್ ಯುನಿವರ್ಸಿಟಿಯ ಯೇನೆಪೋಯ ಕಲಾ ವಾಣಿಜ್ಯ ಮತ್ತು ಆಡಳಿತ ನಿರ್ವಹಣೆ ಕಾಲೇಜಿನಲ್ಲಿ ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲಾ ಕೌಶಲ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಆಶ್ರಯದಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಯಿತು. 780 ಉದ್ಯೋಗಾಕಾಂಕ್ಷಿಗಳು ಉದ್ಯೋಗದ ಮೇಳದ ಪ್ರಯೋಜನ ಪಡೆದರು.
ದಕ್ಷಿಣ ಕನ್ನಡ ಜಿಲ್ಲಾ ಕೌಶಲ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕೌಶಲ ಅಭಿವೃದ್ಧಿ ಅಧಿಕಾರಿ ಸಿ.ಜೆ.ಹೇಮಚಂದ್ರ ಉದ್ಯೋಗ ಮೇಳವನ್ನು ಉದ್ಘಾಟಿಸಿದರು, ವಿಶ್ವವಿದ್ಯಾಲಯದ ಕುಲಪತಿ ಎಂ.ವಿಜಯ ಕುಮಾರ್, ಸಹ ಕುಲಪತಿ ಶ್ರೀಪತಿ ರಾವ್, ಕಾಲೇಜಿನ ಪ್ರಾಂಶುಪಾಲರಾದ ಅರುಣ್ ಭಾಗವತ್ ಭಾಗವಹಿಸಿದರು.
‘ಮೆಡ್‌ಆರ್ಗ್ಯಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಕರ್ನಾಟಕದ ಅಂತರರಾಷ್ಟ್ರೀಯ ವಲಸೆ ಕೇಂದ್ರ, ವಿನ್‌ಮ್ಯಾನ್ ಸಾಫ್ಟ್‌ವೇರ್, ಕಾಂಚನ ಗ್ರೂಪ್, ಮೆಕ್‌ಡೊನಾಲ್ಡ್ಸ್, ಕೆಫೆ ಕಾಫಿ ಡೇ, ಅಭಿಮೊ ಟೆಕ್ನಾಲಜೀಸ್, ದಿಯಾ ಸಿಸ್ಟಮ್ಸ್, ಆಕ್ಸೆಸ್ ರಿಸರ್ಚ್ ಲ್ಯಾಬ್ ಮೊದಲಾದ 35 ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿವೆ. ಬಿಬಿಎ, ಬಿ.ಕಾಂ, ಬಿಸಿಎ, ಐಟಿಐ, ಡಿಪ್ಲೊಮಾ ಹಾಗೂ ವಿವಿಧ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಈ ಉದ್ಯೋಗ ಮೇಳದ ಪ್ರಯೋಜನ ಪಡೆದಿದ್ದಾರೆ. ಈ ಮೇಳದಲ್ಲಿ ಪಾಲ್ಗೊಂಡ ನೂರಾರು ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗದ ಭರವಸೆ ಸಿಕ್ಕಿದೆ’ ಎಂದು ಯೇನೆಪೋಯ ಡೀಮ್ಡ್ ಯುನಿವರ್ಸಿಟಿಯ ಉದ್ಯೊಗ ಅಧಿಕಾರಿ ಪವಿತ್ರ ಶೆಟ್ಟಿ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.