ಮಂಗಳೂರು:ತಾಜುಲ್ ಉಲೇಮಾ ಅಸ್ಸಯ್ಯಿದ್ ಅಬ್ದುಲ್ ರಹಮಾನ್ ಅಲ್ ಬುಖಾರಿ ತಂಙಳ್ (ಉಳ್ಳಾಲ ತಂಙಳ್ ) ಅವರ 11ನೇ ವರ್ಷದ ಉರುಸ್ ಮುಬಾರಕ್ ಇದೇ 4, 5 ಮತ್ತು 6ರಂದು ಕೇರಳದ ಕಣ್ಣೂರು ಜಿಲ್ಲೆಯ ಎಟ್ಟಿಕ್ಕುಳಂನಲ್ಲಿ ನಡೆಯಲಿದೆ.
ಈ ಕುರಿತು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದ ಮದನೀಸ್ ಕೇಂದ್ರ ಸಮಿತಿ ನಾಯಕ ಬಶೀರ್ ಮದನಿ ಅಲ್ ಕಾಮಿಲ್ ಕೂಳೂರು, ‘ಕಾರ್ಯಕ್ರಮದಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸಂಗಮ ಕಾರ್ಯಕ್ರಮಗಳು ನಡೆಯಲಿವೆ. ಇದೇ 4ರಂದು ಮಧ್ಯಾಹ್ನ ಸಯ್ಯಿದ್ ಹಮೀದ್ ಇಂಬಿಚ್ಚಿ ಕೋಯ ತಂಙಳ್ ಧ್ವಜಾರೋಹಣ ನೆರವೇರಿಸಿ ಉರುಸ್ಗೆ ಚಾಲನೆ ನೀಡುವರು. ಇದೇ 6ರಂದು ಮಗ್ರಿಬ್ನ ನಂತರ ಸಮಾರೋಪ ನಡೆಯಲಿದೆ’ ಎಂದು ತಿಳಿಸಿದರು.
ಮದನೀಸ್ ಅಸೋಸಿಯೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಮದನಿ ಬಂಡಾಡಿ, ಉರುಸ್ ಪ್ರಚಾರ ಸಮಿತಿಯ ಎಂ.ಎಂ.ಅಬೂಬಕ್ಕರ್ ಮುಸ್ಲಿಯಾರ್, ಅಬ್ದುಲ್ ಅಜೀಜ್ ಎಚ್. ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.