ಮಂಗಳೂರು: ಯುವ ವಾಹಿನಿ ಸಂಘಟನೆಯ ಕೇಂದ್ರ ಸಮಿತಿ ನಿರ್ಮಿಸಿರುವ ಮನೆ ಹಸ್ತಾಂತರ ಹಾಗೂ ಪೆರ್ಮಂಕಿ ಘಟಕದ ಉದ್ಘಾಟನೆ ಅ.20ರಂದು ನಡೆಯಲಿದೆ ಎಂದು ಸಂಘಟನೆಯ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಕೆ. ಪೂಜಾರಿ ಹೇಳಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಶಿಥಿಲಗೊಂಡಿದ್ದ ಮನೆಯಲ್ಲಿ ಜೀವನ ನಡೆಸುತ್ತಿದ್ದ ಬೊಂಡಂತಿಲ ಗ್ರಾಮದ ತಾರಿಗುಡ್ಡೆಯ ಬೇಬಿ ಪೂಜಾರಿ ಅವರಿಗೆ ಹೊಸ ಮನೆ ನಿರ್ಮಿಸಿಕೊಡಲಾಗಿದ್ದು, ಅ.20ರಂದು ಬೆಳಿಗ್ಗೆ 9.15ಕ್ಕೆ ಮನೆ ಹಸ್ತಾಂತರಿಸಲಾಗುವುದು. ಉದ್ಯಮಿ ದಯಾನಂದ ಬಂಗೇರ ಕಾರ್ಯಕ್ರಮ ಉದ್ಘಾಟಿಸುವರು. ವಕೀಲ ಟಿ.ಎನ್. ಪೂಜಾರಿ, ಸಲಹೆಗಾರ ಎನ್.ಟಿ.ಅಂಚನ್, ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಕೆ, ಜಯರಾಮ ಪೂಜಾರಿ’ ಭಾಗವಹಿಸುವರು ಎಂದರು.
ಘಟಕ ಉದ್ಘಾಟನೆ: 10 ಗಂಟೆಗೆ ಯುವ ವಾಹಿನಿಯ 35ನೇ ಘಟಕವನ್ನು ಪೆರ್ಮಂಕಿಯಲ್ಲಿ ಉದ್ಘಾಟಿಸಲಾಗುವುದು. ಕೊಂಬೆಲ್ ವಿಶಾಲ್ ಗಾರ್ಡನ್ನಲ್ಲಿ ನಡೆಯುವ ಕಾರ್ಯಕ್ರಮವನ್ನು ಉದ್ಯಮಿ ಶೈಲೇಂದ್ರ ಸುವರ್ಣ ಉದ್ಘಾಟಿಸುವರು ಎಂದರು.
ಜಯರಾಮ್ ಪೂಜಾರಿ, ಪ್ರಸಾದ್ ಪಾಲನ್, ದಿನೇಶ್ ಕುಮಾರ್, ಕೀರ್ತಿರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.