ದಾವಣಗೆರೆ: ಮಾರ್ಚ್ 23ರಿಂದ ಜೂನ್ ತಿಂಗಳವರೆಗೆ ಲಾಕ್‌ಡೌನ್ ಸಂದರ್ಭ ದಾವಣಗೆರೆ ವಿಭಾಗೀಯ ಮಟ್ಟದಲ್ಲಿ ₹2.86 ಕೋಟಿ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಸಂದಾಯವಾಗಿದೆ ಎಂದು ದಾವಣಗೆರೆ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಜಂಬಿಗಿ ರಾಧೇಶ್ ತಿಳಿಸಿದ್ದಾರೆ.
‘ಏಪ್ರಿಲ್, ಮೇ ಹಾಗೂ ಜೂನ್ ಈ ಮೂರು ತಿಂಗಳ ಅವಧಿಯಲ್ಲಿ ₹62 ಲಕ್ಷ ಪ್ರವೇಶ ತೆರಿಗೆ ಹಾಗೂ ₹181.12 ಕೋಟಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹವಾಗಿದೆ. 2020-21ರ ಅವಧಿಯಲ್ಲಿ ಆದಾಯ ತೆರಿಗೆ ಮೊದಲ ಕಂತು ಜೂನ್ 15ರವರೆಗೆ ಮುಂಗಡ ತೆರಿಗೆಯ ಮೊತ್ತ ₹50 ಕೋಟಿ ಸಂಗ್ರಹವಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
‘ದಾವಣಗೆರೆ ವಿಭಾಗಿಯ ಸಣ್ಣ ಹಾಗೂ ದೊಡ್ಡ ವ್ಯಾಪಾರಿಗಳು, ದಲ್ಲಾಳಿ ವರ್ತಕರು, ಖರೀದಿ ಮತ್ತು ಅಡಿಕೆ ವರ್ತಕರು, ಬೆಳ್ಳಿ ಬಂಗಾರದ ವರ್ತಕರು ಮುಂದಿನ ದಿನಗಳಲ್ಲಿ ವಿಕ್ರಿ ಬಿಲ್ಲನ್ನು ಕೊಟ್ಟು ಹೆಚ್ಚಿನ ತೆರಿಗೆಯನ್ನು ಪಾವತಿಸಬೇಕು. ಇಲ್ಲದ ಪಕ್ಷದಲ್ಲಿ ಆದಾಯ ತೆರಿಗೆ ಮತ್ತು ವಾಣಿಜ್ಯ ತೆರಿಗೆಯ ಅಧಿಕಾರಿಗಳು ಭೇಟಿ ನೀಡಿ ವಹಿವಾಟಿನ ಪುಸ್ತಕಗಳನ್ನು ಪರಿಶೀಲಿಸಿ ತೆರಿಗೆ, ದಂಡ ಮತ್ತು ಬಡ್ಡಿ ವಿಧಿಸುತ್ತಾರೆ. ಆದ್ದರಿಂದ ಇದಕ್ಕೆ ಅವಕಾಶ ಕೊಡಬೇಡಿ’ ಎಂದು ಅವರು ಮನವಿ ಮಾಡಿದ್ದಾರೆ.
ವಾಣಿಜ್ಯ ತೆರಿಗೆ ಮತ್ತು ಆದಾಯ ತೆರಿಗೆ ಸಂದಾಯದ ವಿವರ
ತೆರಿಗೆಯ ವಿಧ-ಮೊತ್ತ (₹ಕೋಟಿಗಳಲ್ಲಿ)
2018–19
ಮೌಲ್ಯ ವರ್ಧಿತ ತೆರಿಗೆ (ವ್ಯಾಟ್)-₹37.95
ಪ್ರವೇಶ ತೆರಿಗೆ-₹1.45
ಸರಕು ಮತ್ತು ಸೇವಾ ತೆರಿಗೆ-₹1240.81
ವೃತ್ತಿ ತೆರಿಗೆ-₹24.38
ಆದಾಯ ತೆರಿಗೆ-₹248 ಕೋಟಿ
2019–20
ಮೌಲ್ಯವರ್ಧಿತ ತೆರಿಗೆ (ವ್ಯಾಟ್)- ₹54.04 ಕೋಟಿ
ಪ್ರವೇಶ ತೆರಿಗೆ-₹1.29 ಕೋಟಿ
ಸರಕು ಮತ್ತು ಸೇವಾ ತೆರಿಗೆ-₹1460.65 ಕೋಟಿ
ವೃತ್ತಿ ತೆರಿಗೆ- ₹26.04 ಕೋಟಿ
ಆದಾಯ ತೆರಿಗೆ- ₹300 ಕೋಟಿ
ವೃತ್ತಿತೆರಿಗೆ- ₹9.22 ಕೋಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.