ADVERTISEMENT

ಸಾಲ ಕೊಡಿಸುವುದಾಗಿ ನಂಬಿಸಿ ₹12.15 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2024, 5:21 IST
Last Updated 3 ಏಪ್ರಿಲ್ 2024, 5:21 IST

ದಾವಣಗೆರೆ: ಸ್ವಉದ್ಯೋಗ ಮಾಡಲು ಸಾಲ ಕೊಡುವುದಾಗಿ ನಂಬಿಸಿ ಪ್ಲಂಬಿಂಗ್ ಕೆಲಸ ಮಾಡುವವರಿಂದ ₹ 12.15 ಲಕ್ಷ ವಂಚಿಸಿರುವ ಘಟನೆ ನಡೆದಿದೆ.

ದಾವಣಗೆರೆ ನಿವಾಸಿಗಳಾದ ಮಲ್ಲಿಕಾರ್ಜುನ್ ಸಿ., ತಿಪ್ಪಣ್ಣ ಹಾಗೂ ರವಿ ಮೋಸ ಹೋದವರು. ಶಾಮನೂರು ರಸ್ತೆಯ ಶ್ರೀ ಸರ್ವೇಶ್ವರ ಸೌಹಾರ್ದ ಸಹಕಾರಿ ನಿಯಮಿತ ಬ್ಯಾಂಕ್‌ನ ಸಂಸ್ಥಾಪಕ ಅಧ್ಯಕ್ಷ ಕಲ್ಮೇಶ್ ವೈ. ಅಗಸಿಮನಿ ಈತನ ಪತ್ನಿ ಸರಸ್ವತಿ ಹಾಗೂ ಬ್ಯಾಂಕ್‌ನ ಮ್ಯಾನೇಜರ್ ಮಂಜುನಾಥ ನಾಯ್ಕ ಅವರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.

‘ಈ ಮೂವರು ವ್ಯಕ್ತಿಗಳು ಪ್ರತಿಯೊಬ್ಬರು ₹ 4.05 ಲಕ್ಷ ಷೇರು ನೀಡಿದರೆ ₹ 15 ಲಕ್ಷದಿಂದ ₹20 ಲಕ್ಷದವರೆಗೂ ಸಾಲ ನೀಡುತ್ತೇವೆ. ಇದರಿಂದ ದೊಡ್ಡ ಉದ್ಯೋಗವನ್ನು ಮಾಡಿಕೊಳ್ಳಬಹುದು ಎಂದು ನಂಬಿಸಿ, ಪ್ರತಿಯೊಬ್ಬರಿಂದ ತಲಾ ₹ 4.05 ಲಕ್ಷದಂತೆ ನಮ್ಮಿಂದ ₹12.15 ಲಕ್ಷವನ್ನು ತೆಗೆದುಕೊಂಡರು. ಸಾಲ ಕೇಳಿದಾಗ ಒಂದು ತಿಂಗಳು ಬಿಟ್ಟು ಬನ್ನಿ ಎಂದು ಹೇಳಿದರು.

ADVERTISEMENT

ಸಾಲ ಬೇಡ ನಾವು ಕಟ್ಟಿರುವ ಷೇರು ಹಣವನ್ನಾದರೂ ನೀಡಿ ಎಂದು ಕೇಳಿದರೂ ಕೊಡದೇ ಬೆದರಿಕೆಯೊಡ್ಡಿದರು ಎಂದು ಮಲ್ಲಿಕಾರ್ಜುನಪ್ಪ ದೂರಿನಲ್ಲಿ ತಿಳಿಸಿದ್ದಾರೆ.

ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.