ಬಸವಾಪಟ್ಟಣ: ಸಾಮಾನ್ಯವಾಗಿ ಮಳೆಗಾಲದಲ್ಲಿ ಮನೆಯ ಅಂಗಳದಲ್ಲಿ ಕಪ್ಪುಮಿಶ್ರಿತ ಕಂದು ಬಣ್ಣದ ಕಪ್ಪೆ ಕಂಡುಬರುತ್ತವೆ. ಆದರೆ, ಇಲ್ಲಿನ ತೋಟವೊಂದರಲ್ಲಿ ಬಿಳಿ ಬಣ್ಣದ ದೇಹ ಮತ್ತು ಕೆಂಪು ಕಾಲುಗಳನ್ನು ಹೊಂದಿರುವ ಕಪ್ಪೆ ಕಂಡು ಬಂದಿದ್ದು, ಎಲ್ಲರಿಗೂ ಅಪರೂಪ ಎನಿಸಿತು.
ಈ ಕಪ್ಪೆ ಗಿಡಗಳಿಂದ ಗಿಡಕ್ಕೆ ಮರದಿಂದ ಮರಕ್ಕೆ ವೇಗವಾಗಿ ಜಿಗಿಯುತ್ತಿದ್ದು, ಗೋಡೆಗಳ ಮೇಲೆ ಹಲ್ಲಿಗಳಂತೆ ಹರಿದಾಡುವ ಶಕ್ತಿ ಹೊಂದಿದೆ. ಸಾಮಾನ್ಯವಾಗಿ ತೋಟಗಳಲ್ಲಿ ದೊರೆಯುವ ಹುಳ ಹುಪ್ಪಡಿಗಳು ಇದರ ಆಹಾರವಾಗಿದ್ದು, ಅಲ್ಲಿಯೇ ಹೆಚ್ಚಾಗಿ ಇರುತ್ತವೆ ಎಂದು ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.