ADVERTISEMENT

ಕಮಿಷನ್ ಆಸೆಗೆ ಬಿದ್ದು ₹13 ಲಕ್ಷ ಕಳೆದುಕೊಂಡ ವ್ಯಾಪಾರಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2023, 5:49 IST
Last Updated 27 ಏಪ್ರಿಲ್ 2023, 5:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದಾವಣಗೆರೆ: ಪ್ರಾಡೆಕ್ಟ್‌ಗಳನ್ನು ಖರೀದಿಸಿದರೆ ಕಮಿಷನ್ ಸಿಗುತ್ತದೆ ಎಂಬ ಆಸೆಗೆ ಬಿದ್ದು ವ್ಯಾಪಾರಿಯೊಬ್ಬರು ಆನ್‌ಲೈನ್‌ನಲ್ಲಿ ₹ 13 ಲಕ್ಷ ಕಳೆದುಕೊಂಡಿದ್ದಾರೆ.

ವಿನೋಬ ನಗರದ ಆಂಟೋನಿ ಬ್ರಿಜೇಶ್ ಹಣ ಕಳೆದುಕೊಂಡವರು. ಟೆಲಿಗ್ರಾಂಗೆ ಬಂದ ಮೆಸೇಜ್‌ ಮೇಲೆ ಕ್ಲಿಕ್ ಮಾಡಿದ ಬ್ರಿಜೇಶ್ ಅವರಿಗೆ ಕಮಿಷನ್ ಆಸೆ ತೋರಿಸಿ ಟ್ರಯಲ್ ಅಕೌಂಟ್‌ಗೆ ಕ್ಲಿಕ್ ಮಾಡಲು ಸೂಚಿಸಿದ್ದಾರೆ. ಆ ವೇಳೆ ಕ್ಲಿಕ್ ಮಾಡಿದಾಗ ಬ್ರಿಜೇಶ್ ಅವರಿಗೆ ₹ 1200 ಜಮಾ ಆಗಿದೆ.

ಟಾಸ್ಕ್ ಮುಂದುವರಿಸುತ್ತಾ ಹೋದಂತೆ ಎರಡು ಹಂತಗಳಲ್ಲಿ ಇವರು ಹಾಕಿದ್ದಕ್ಕಿಂತ ಹೆಚ್ಚಿನ ಹಣ ಖಾತೆಗೆ ಜಮಾ ಆಗಿದೆ. ಹಣದ ಆಸೆಗೆ ಬಿದ್ದ ಬ್ರಿಜೇಶ್ ₹ 9.99 ಲಕ್ಷದಷ್ಟು ಹಣವನ್ನು ಹಾಕಿದ್ದಾರೆ. ಆದರೆ ಅವರು ಟಾಸ್ಕ್ ಪೂರ್ಣಗೊಳಿಸದೇ ಇರುವುದರಿಂದ ಹಣ ಹಾಕಲು ಸಾಧ್ಯವಿಲ್ಲ ಎಂದಾಗ ಮೋಸದ ಜಾಲ ಅರಿವಾಗಿದೆ.

ADVERTISEMENT

ಮೋಸ ಹೋದವರಿಗೆ ಹೆಲ್ಪ್ ಮಾಡುವವರ ಬಗ್ಗೆ ಫೇಸ್‌ಬುಕ್‌ನಲ್ಲಿ ನೋಡಿದಾಗ ಗೋಲ್ಡನ್ ವೆಕ್ಟರಿ ಎಂಬ ಹೊಸ ಆ್ಯಪ್‌ನಲ್ಲಿ ಮೋಸದ ಹಣವನ್ನು ವಾಪಸ್ ಕೊಡಿಸುತ್ತೇನೆ ಎಂದು ನಂಬಿಸಿ ₹3.01 ಲಕ್ಷ ಮೋಸ ಮಾಡಲಾಗಿದೆ.

ಈ ಕುರಿತು ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.