ದಾವಣಗೆರೆ: ಶಾಮನೂರು ಬಳಿಯ ಜರೆಕಟ್ಟೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಡಿಕ್ಕಿ ಹೊಡೆದು ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಶನಿವಾರ ಮೃತಪಟ್ಟಿದ್ದಾರೆ.
ಬಂಬೂಬಜಾರ್‌ನ ಚೌಡಮ್ಮ ರಸ್ತೆ ನಿವಾಸಿ ಎನ್.ಪ್ರಸನ್ನ (24) ಮೃತಪಟ್ಟವರು.ಪ್ರಸನ್ನ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕೊರೊನಾ ಕಾರಣ ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದರು. ಜ.29ಕ್ಕೆ ಜರೆಕಟ್ಟೆಯಲ್ಲಿರುವ ತನ್ನ ಸ್ನೇಹಿತನ ಮನೆಯಿಂದ ಮನೆಗೆ ಬರುತ್ತಿರುವಾಗ, ಪೆಟ್ರೋಲ್ ಖಾಲಿಯಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಿಕೊಂಡು ನಿಂತಿದ್ದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸಮೇತ ಕೆಳಗೆ ಬಿದ್ದಿದ್ದಾರೆ. ಇದಾದ ಬಳಿಕ ಇನ್ನೊಂದು ಬೈಕ್‌ನಲ್ಲಿದ್ದ ಜನತಾ ಕಾಲೊನಿಯ ಸವಾರ ಮಂಜುನಾಥ್ ತೀವ್ರವಾಗಿ ಗಾಯಗೊಂಡಿದ್ದ ಪ್ರಸನ್ನರನ್ನು ಬಾಪೂಜಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಮಾರ್ಗ ಮಧ್ಯೆಯೇ ಪ್ರಸನ್ನ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ರ್ಯಾಕ್ಟರ್ ಎಂಜಿನ್ ಮೇಲಿಂದ ಬಿದ್ದು ಸಾವು
ನ್ಯಾಮತಿ: ತಾಲ್ಲೂಕಿನ ಕೆಂಗಟ್ಟೆ ಗ್ರಾಮದ ಬಳಿ ಮಣ್ಣು ಲೋಡ್ ಮಾಡಿದ ಟ್ರ್ಯಾಕ್ಟರ್ ಎಂಜಿನ್ ಬಳಿ ಕುಳಿತಿದ್ದ ವ್ಯಕ್ತಿಯೊಬ್ಬರು ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.
ತಾಲೂಕಿನ ಚಟ್ನಹಳ್ಳಿ ಗ್ರಾಮದ ಬಸವರಾಜಪ್ಪ (62) ಮೃತ ವ್ಯಕ್ತಿ. ಭದ್ರಾವತಿ ತಾಲೂಕು ಮಂಗೋಟೆ ಗ್ರಾಮದ ಮಧು ಹಳ್ಳದಿಂದ ಮಣ್ಣಿನ ಲೋಡ್ ಮಾಡಿಕೊಂಡು ಅದರಲ್ಲಿ ಬಸವರಾಜಪ್ಪ ಅವರನ್ನು ಕೂರಿಸಿಕೊಂಡು ಚೀಲೂರು ಮಾರ್ಗವಾಗಿ ಹೋಗುತ್ತಿರುವಾಗ ರಾತ್ರಿ ಕೆಂಗಟ್ಟೆ ಗ್ರಾಮದ ಹತ್ತಿರ ರಸ್ತೆಯಲ್ಲಿ ಬರುವಾಗ ರಸ್ತೆಯ ಬದಿಯಲ್ಲಿದ್ದ ಗುಂಡಿಗೆ ಟ್ರ್ಯಾಕ್ಟರ್‌ನ್ನು ಇಳಿಸಿದ್ದರಿಂದ ಟ್ರಾಕ್ಟರ್ ಇಂಜಿನ್‌ನ ಮೇಲೆ ಕುಳಿತಿದ್ದ ಬಸವರಾಜಪ್ಪ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.
ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.