ADVERTISEMENT

ನೊಳಂಬ ಸಮಾಜದ ಕಡೆಗಣನೆ: ಆರೋಪ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2023, 14:46 IST
Last Updated 17 ಡಿಸೆಂಬರ್ 2023, 14:46 IST

ಕಡರನಾಯ್ಕನಹಳ್ಳಿ: ‘ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದಿಂದ ನೊಳಂಬ ಸಮಾಜದ ಕಡೆಗಣನೆ ಆಗಿದೆ’ ಎಂದು ನೊಳಂಬ ಸಮಾಜದ ಮುಖಂಡ ವೃಷಭಪುರಿ ಮಹಾಸಂಸ್ಥಾನ ಬೃಹನ್ಮಠದ ಟ್ರಸ್ಟಿ ಎಸ್.ವಿ. ಮಹೇಂದ್ರ ದೂರಿದರು.

ಸಮೀಪದ ವೃಷಭಪುರಿ ಮಹಾಸಂಸ್ಥಾನ ಬೃಹನ್ಮಠದಲ್ಲಿ ಭಾನುವಾರ ನಡೆದ ನೊಳಂಬ ಸಮಾಜದ ಸಭೆ ಉದ್ದೇಶಿಸಿ ಮಾತನಾಡಿದರು.

‘ದಾವಣಗೆರೆಯಲ್ಲಿ ಇದೇ 23, 24ರಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ 24ನೇ ಮಹಾ ಅಧಿವೇಶನ ನಡೆಯಲಿದೆ. ನಮ್ಮ ನಂದಿಗುಡಿ ಮಠ 5 ಜಿಲ್ಲೆಗಳ ವ್ಯಾಪ್ತಿ ಹೊಂದಿದೆ. ಒಟ್ಟು 12 ನೊಳಂಬ ಸಮಾಜದ ಮಠಗಳು ಇವೆ. ವೀರಶೈವ ಜನಸಂಖ್ಯೆಯಲ್ಲಿ ನೊಳಂಬ ಸಮಾಜ 3ನೇ ದೊಡ್ಡ ಸಮುದಾಯವಾಗಿದೆ. ಆದಾಗ್ಯೂ ಸಮಾಜದ ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿಯನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಜಿಲ್ಲೆಯ ಮಾಜಿ ಶಾಸಕ ಗಂಗಪ್ಪ ಅವರನ್ನು ಪರಿಗಣಿಸಿಲ್ಲ, ಇದರಿಂದ ನೋವಾಗಿದೆ’ ಎಂದರು.

ADVERTISEMENT

‘ಈ ಎಲ್ಲ ವಿಚಾರವಾಗಿ ಮಹಾ ಅಧಿವೇಶನದಲ್ಲಿ ಭಾಗವಹಿಸದಿರಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ನಂತರದ ದಿನಗಳಲ್ಲಿ ಈ ಬಗ್ಗೆ ಸೂಕ್ತ ತೀರ್ಮಾನಕ್ಕೆ ಬರಲಾಗುವುದು’ ಎಂದು ತಿಳಿಸಿದರು.

ರಾಜ್ಯದ ವಿವಿಧ ಭಾಗಗಳಿಂದ ನೊಳಂಬ ಸಮಾಜದ ಮುಖಂಡರು ಭಾಗವಹಿಸಿದ್ದರು.

ಶಿವಮೊಗ್ಗ ಜಿಲ್ಲೆಯ ರಾಜಶೇಖರ್, ವೇದಮೂರ್ತಿ, ಕೆ.ಎಂ.ಜಗದೀಶ್, ಹಾವೇರಿ ಜಿಲ್ಲೆಯ ಸುರೇಶ್ ಹುಚ್ಚಣ್ಣರ, ಅನಂತ ದೇವರಮನಿ, ತುಮಕೂರಿನ ಉಮೇಶ್ ಬಣಕಾರ್, ಹಾಸನದ ಶಿವಕುಮಾರ್, ಬೆಂಗಳೂರಿನ ಲೋಕಪ್ರಿಯ, ಜಿಲ್ಲೆಯ ಬಿ.ನಂದಿಗೌಡ, ಮಂಜಪ್ಪ ಬಂಡೇರ, ಗೋವಿನಾಳ ಹನುಮಗೌಡ, ನೊಳಂಬ ಸ್ವಯಂ ಸೇವಾ ಸಂಘದ ಪದಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.