ADVERTISEMENT

ಚನ್ನಗಿರಿ | ಕ್ವಿಂಟಲ್‌ಗೆ ₹ 51,000 ಮುಟ್ಟಿದ ಅಡಿಕೆ ದರ: ಬೆಳೆಗಾರರಲ್ಲಿ ಸಂತಸ

ಎಚ್.ವಿ. ನಟರಾಜ್‌
Published 31 ಅಕ್ಟೋಬರ್ 2024, 7:21 IST
Last Updated 31 ಅಕ್ಟೋಬರ್ 2024, 7:21 IST
ಚನ್ನಗಿರಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಅಡಿಕೆಯನ್ನು ಒಣಗಲು ಹಾಕಿರುವುದು
ಚನ್ನಗಿರಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಅಡಿಕೆಯನ್ನು ಒಣಗಲು ಹಾಕಿರುವುದು   

ಚನ್ನಗಿರಿ: ಎರಡು ದಿನಗಳಿಂದ ಅಡಿಕೆ ದರ ಕ್ವಿಂಟಲ್‌ಗೆ ₹ 51,000 ಮುಟ್ಟಿದ್ದು, ಬೆಳೆಗಾರರಲ್ಲಿ ಸಂತಸ ಮೂಡಿದೆ.

ವಾರದ ಹಿಂದೆ ಅಡಿಕೆ ದರ ಪ್ರತಿ ಕ್ವಿಂಟಲ್‌ಗೆ ₹ 41,000ದಿಂದ ₹ 45,000 ಅಸುಪಾಸಿನಲ್ಲಿತ್ತು. ಬೆಳೆಗಾರರು ಅಡಿಕೆ ಮಾರಾಟ ಮಾಡಲು ಮೀನ–ಮೇಷ ಎಣಿಸಿದ್ದರು. ಇದೀಗ ದರ ಹೆಚ್ಚಿರುವುದರಿಂದ ಮಾರಾಟಕ್ಕೆ ಉತ್ಸುಕರಾಗಿದ್ದಾರೆ.

ಚನ್ನಗಿರಿಯಲ್ಲಿ 39,000 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆಯನ್ನು ಬೆಳೆಯಲಾಗುತ್ತಿದೆ. ಈ ಬಾರಿ ಉತ್ತಮ ಮುಂಗಾರು ಮತ್ತು ಹಿಂಗಾರು ಮಳೆಯಾಗಿರುವುದರಿಂದ ಅಡಿಕೆ ಬೆಳೆಗಾರರಿಗೆ ನೀರಿನ ಸಮಸ್ಯೆ ಕಂಡುಬಂದಿಲ್ಲ. ತಾಲ್ಲೂಕಿನಲ್ಲಿ ಅಡಿಕೆ ಕೊಯ್ಲು ಮುಂದುವರಿದಿದ್ದು, ಇನ್ನೂ ಒಂದು ತಿಂಗಳು ನಡೆಯುತ್ತದೆ.

ADVERTISEMENT

‘ಈ ವರ್ಷ ಇಳುವರಿ ತುಸು ಹೆಚ್ಚಾಗಿದೆ. ಕಳೆದ ವರ್ಷ ಮಳೆ ಕೊರತೆಯ ಕಾರಣ ಇಳುವರಿ ಕುಸಿದಿತ್ತು. ಈಗ ಕ್ವಿಂಟಲ್‌ಗೆ ಕನಿಷ್ಠ ₹ 43,299, ಗರಿಷ್ಠ ₹ 51,000 ಹಾಗೂ ಸರಾಸರಿ ₹ 49,407 ದರ ಇದ್ದು, ಅಡಿಕೆ ಮಾರಾಟಕ್ಕೆ ಮುಂದಾಗಿದ್ದೇವೆ’ ಎಂದು ಮಾವಿನಕಟ್ಟೆ ಗ್ರಾಮದ ರೈತ ಪುನೀತ್ ತಿಳಿಸಿದರು.

ಇನ್ನು ತೀವ್ರ ಚಳಿಗಾಲ ಆರಂಭವಾಗುತ್ತದೆ. ತಾಲ್ಲೂಕಿನ ಅಡಿಕೆಗೆ ಗುಟ್ಕಾ ತಯಾರಿಕಾ ಕಂಪನಿಳಿಂದ ಬೇಡಿಕೆ ಇದ್ದು, ಇಲ್ಲಿಗೇ ಬಂದು ಖರೀದಿ ಮಾಡುತ್ತಾರೆ. ಚಳಿಗಾಲದಲ್ಲಿ ಅಡಿಕೆಯಲ್ಲಿ ತೇವಾಂಶ ಹೆಚ್ಚುವ ಕಾರಣ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳ ಮೊದಲ ವಾರದವರೆಗೂ  ಖರೀದಿ ಜೋರಾಗಿ ನಡೆಯುತ್ತದೆ. ಅಂತೆಯೇ ದರ ₹ 51,000 ಮುಟ್ಟಿದ್ದು, ಬೆಳೆಗಾರರು ಮಾರಾಟಕ್ಕೆ ಮುಂದಾಗುತ್ತಿದ್ದಾರೆ ಎಂದು ತುಮ್ಕೋಸ್ ಅಧ್ಯಕ್ಷ ಆರ್.ಎಂ. ರವಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.