ಹರಿಹರ: ಇಲ್ಲಿನ ನಗರಸಭೆ ಸದಸ್ಯ ಆಟೊ ಹನುಮಂತಪ್ಪ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ತಹಶೀಲ್ದಾರ್ ಕೆ.ಎಂ. ಗುರುಬಸವರಾಜ್ ಅವರಿಗೆ ಮನವಿ ಸಲ್ಲಿಸಿದರು.
‘ನಗರದ ಆಶ್ರಯ ಕಾಲೊನಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಹಾಗೂ ರಾಗಿಯನ್ನು ಸಾಗಣೆ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಹನುಮಂತಪ್ಪ ಅವರಿಗೆ ತಿಳಿಸಿದ್ದರು. ಅವರು ಸ್ಥಳಕ್ಕೆ ಹೋಗಿ ಪರಿಶೀಲಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆಗ ನ್ಯಾಯಬೆಲೆ ಅಂಗಡಿ ಮಾಲೀಕರಾದ ಡಿ.ಹನುಮಂತಪ್ಪ ಹಾಗೂ ಅವರ ಪತ್ನಿ ಶಾರದಮ್ಮ ಆಟೊ ಹನುಮಂತಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಬಿಜೆಪಿ ಗ್ರಾಮಾಂತರ ಘಟಕ ಅಧ್ಯಕ್ಷ ಎಂ.ಪಿ.ಲಿಂಗರಾಜ್ ದೂರಿದರು.
ಹನುಮಂತಪ್ಪ ಅವರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ಸಲ್ಲಿಸಿದರು.
ನಗರಸಭೆ ಸದಸ್ಯರಾದ ಆಟೊ ಹನುಮಂತಪ್ಪ, ಬಾಬುಲಾಲ್, ಆಟೊ ಚಾಲಕರ ಸಂಘದ ಗೌರವಾಧ್ಯಕ್ಷ ಸಿದ್ದಲಿಂಗಸ್ವಾಮಿ, ಮುಖಂಡರಾದ ರಾಜು ರೋಖಡೆ, ಎಚ್.ಮಂಜನಾಯ್ಕ, ಸಂತೋಷ್ ಗುಡಿಮನಿ, ಬಾತಿ ಚಂದ್ರಶೇಖರ್, ಜಡಿಯಪ್ಪ, ಸ್ವಾತಿ ಹನುಮಂತಪ್ಪ, ಗಂಗಾಧರ ದುರುಗೋಜಿ, ಆದಿತ್ಯ ಟಿ. ಮೆರ‍್ವಾಡೆ, ಅಂಜಿನಪ್ಪ, ಶಾಂತರಾಜ್, ಆನಂದ್, ವಿನಾಯಕ ಆರಾಧ್ಯಮಠ, ಗಣೇಶ್, ರಾಜನಹಳ್ಳಿ ಸಂತೋಷ್, ಅನಿಲ್ ಸಾವಂತ್, ರಾಜು ಖಿರೋಜಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.