ಮಲೇಬೆನ್ನೂರು: ಹೋಬಳಿ ವ್ಯಾಪ್ತಿಯಲ್ಲಿ ಶನಿವಾರ ‘ಭೂಮಿಹುಣ್ಣಿಮೆ’ ಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಆಶ್ವಯುಜ ಶುದ್ಧ ಹುಣ್ಣಿಮೆಯಂದು ಬಸಿರು ಹೊತ್ತ ಭೂ ತಾಯಿಗೆ ವಂದಿಸುವ ಹಬ್ಬ 'ಭೂಮಿ ಹುಣ್ಣಿಮೆ’. ಸೀಗೆ ಹುಣ್ಣಿಮೆ’ ಎಂದು ಕರೆಯಲಾಗುತ್ತದೆ.
ನವರಾತ್ರಿ ಮತ್ತು ದೀಪಾವಳಿ ನಡುವೆ ತೆನೆ ಹೊತ್ತು ನಿಂತ ಭೂತಾಯಿಯ ಬಸಿರ ಬಯಕೆ ತೀರಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ಗಂಗಾ ಪೂಜೆ, ಭತ್ತ, ಅಡಿಕೆ ಮರಕ್ಕೆ ಹಸಿರು ಸೀರೆ ಉಡಿಸಿ ಬಳೆ, ಸೀರೆ, ಕುಪ್ಪಸ ತೊಡಿಸಲಾಗುತ್ತದೆ. ಕಡುಬು, ಬುತ್ತಿ, ಚಿತ್ರಾನ್ನ, ಸೇರಿ ವಿವಿಧ ಭಕ್ಷ್ಯಗಳನ್ನು ಎಡೆ ಇಟ್ಟು, ಬಳಿಕ ಪೂಜೆ ನೆರವೇರಿಸುತ್ತಾರೆ. ತೆನೆಕಟ್ಟಿದ ಬೆಳೆ ಯಾವುದೇ ಅಡ್ಡಿ ಆತಂಕ ಇಲ್ಲದೆ ಕಣಕ್ಕೆ ಬಂದು ರಾಶಿ ಆಗಲಿ ಎಂದು ಪ್ರಾರ್ಥಿಸಲಾಗುವುದು ಎಂದು ಸ್ಥಳೀಯರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.