ADVERTISEMENT

ನ್ಯಾಮತಿ: ಆಕಸ್ಮಿಕವಾಗಿ ಕೊರಳಿಗೆ ಉರುಳು ಬಿದ್ದು ಬಾಲಕ ಸಾವು 

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2024, 6:31 IST
Last Updated 23 ಫೆಬ್ರುವರಿ 2024, 6:31 IST
ಪಿ.ಜೆ. ಕೊಟ್ರೇಶಿ
ಪಿ.ಜೆ. ಕೊಟ್ರೇಶಿ   

ನ್ಯಾಮತಿ: ಜೋಕಾಲಿಯಲ್ಲಿ ಆಟವಾಡುತ್ತಿರುವಾಗ ಆಕಸ್ಮಿಕವಾಗಿ ಕೊರಳಿಗೆ ಉರುಳು ಬಿದ್ದು ಬಾಲಕ ಮೃತಪಟ್ಟ ಘಟನೆ ತಾಲ್ಲೂಕಿನ ಸವಳಂಗ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.

ಪಿ.ಜೆ. ಕೊಟ್ರೇಶಿ (13) ಮೃತ ಬಾಲಕ.

ಶಾಲೆಯಿಂದ ಮನೆಗೆ ಬಂದವನೇ ನಡುಮನೆಯಲ್ಲಿ ಕೂಸು ಆಡಿಸಲು ಹಾಕಿದ್ದ ಜೋಕಾಲಿಯಲ್ಲಿ ಆಡುವಾಗ ದುರ್ಘಟನೆ ನಡೆದಿದೆ. 

ADVERTISEMENT

ಶಿವಮೊಗ್ಗ ಜ್ಞಾನಸಾಗರ ವಿದ್ಯಾಸಂಸ್ಥೆಯಲ್ಲಿ 4ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಬಾಲಕನ ತಂದೆ ಎನ್.ಜಿ. ಪ್ರವೀಣ ನೀಡಿದ ದೂರಿನನ್ವಯ ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.