ADVERTISEMENT

ದಾವಣಗೆರೆ | ಮಿದುಳು ಜ್ವರ; ಬಾಲಕಿ ಸಾವು - ರೋಗ ಹೇಗೆ ಹರಡುತ್ತದೆ?

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 14:11 IST
Last Updated 5 ಮಾರ್ಚ್ 2024, 14:11 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ದಾವಣಗೆರೆ: ಮಿದುಳು ಜ್ವರದಿಂದ (ಜಪಾನೀಸ್ ಎನ್ಸೆಫಾಲಿಟಿಸ್ –ಜೆಇ) ಬಳಲುತ್ತಿದ್ದ 11 ವರ್ಷದ ಬಾಲಕಿ ಕೆಲ ದಿನಗಳ ಹಿಂದೆ ಮೃತಪಟ್ಟಿದ್ದಾಳೆ.

ನಗರ ಸಮೀಪದ ಗ್ರಾಮವೊಂದರ ಬಾಲಕಿಯನ್ನು 2023ರ ನ.28ರಂದು ಉಡುಪಿಯ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಿ.1ರಂದು ಬಾಲಕಿಗೆ ಮಿದುಳು ಜ್ವರ ತಗುಲಿರುವುದು ದೃಢಪಟ್ಟಿತ್ತು. ಇದೇ ಜ.12ರ ವರೆಗೆ ಅಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿತ್ತು. ಬಳಿಕ ಗ್ರಾಮಕ್ಕೆ ಮರಳಿದ್ದ ಬಾಲಕಿ ಫೆಬ್ರುವರಿ 11ರಂದು ಮೃತಪಟ್ಟಿದ್ದಾಳೆ ಎಂದು ಜಿಲ್ಲಾ ಮಲೇರಿಯಾ ಅಧಿಕಾರಿ ಗಂಗಾಧರ ತಿಳಿಸಿದ್ದಾರೆ.

ADVERTISEMENT

ಎಲ್ಲರಿಗೂ ಬರಲ್ಲ:

ಜಪಾನೀಸ್ ಎನ್ಸೆಫಾಲಿಟಿಸ್ ಸೋಂಕು ಅಪರೂಪದಲ್ಲೇ ಅಪರೂಪವಾಗಿದೆ. ಇದು ಕೊಕ್ಕರೆಯಂತಹ ಪಕ್ಷಿಗಳು ಹಾಗೂ ಹಂದಿ, ದನಗಳಲ್ಲಿ ಚಲನವಾಗುತ್ತಿರುತ್ತದೆ. ಆದರೆ, ಅವುಗಳಿಗೆ ರೋಗ ತಗುಲುವುದಿಲ್ಲ. ಸೋಂಕು ಇರುವ ಪಕ್ಷಿ, ಹಂದಿ ಅಥವಾ ದನಗಳಿಗೆ ಕಚ್ಚಿದ ಸೊಳ್ಳೆ ಮನುಷ್ಯರಿಗೆ ಕಚ್ಚಿದರೆ ಈ ಮಿದುಳು ಜ್ವರ ಹರಡುತ್ತದೆ. ಸೊಳ್ಳೆ ಕಚ್ಚಿದ ಸಾವಿರ ಜನರಲ್ಲಿ ಒಬ್ಬರಿಗೆ ಮಾತ್ರ ಮಿದುಳು ಜ್ವರ ಕಂಡುಬರುತ್ತದೆ ಎನ್ನುತ್ತಾರೆ ವೈದ್ಯರು.

ಮುನ್ನೆಚ್ಚರಿಕೆ ಕ್ರಮ:

ಬಾಲಕಿಗೆ ಮಿದುಳು ಜ್ವರ ತಗುಲಿರುವುದು ದೃಢಪಟ್ಟ ಕೂಡಲೇ ಗ್ರಾಮದಲ್ಲಿ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. 4 ವಾರ ಫಾಗಿಂಗ್‌ ನಡೆಸಿ, ಸೊಳ್ಳೆಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ. ಗ್ರಾಮಸ್ಥರಲ್ಲೂ ಅರಿವು ಮೂಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.