ADVERTISEMENT

ಜಾತಿ ಪ್ರಮಾಣಪತ್ರ: ಸಮಸ್ಯೆ ಬಗೆಹರಿಸಲು ಯತ್ನ: ಎಂ.ಪಿ. ರೇಣುಕಾಚಾರ್ಯ

ಕುಂಬಾರ ಸಮಾಜದ ಒಗ್ಗಟ್ಟು ಪ್ರದರ್ಶನ, ವಿಚಾರಸಂಕಿರಣ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2021, 5:08 IST
Last Updated 1 ಫೆಬ್ರುವರಿ 2021, 5:08 IST
ನ್ಯಾಮತಿಯಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭವನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಉದ್ಘಾಟಿಸಿದರು. ಕುಂಬಾರ ಗುಂಡಯ್ಯ ಬಸವ ಶರಣರು, ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಇದ್ದರು.
ನ್ಯಾಮತಿಯಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭವನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಉದ್ಘಾಟಿಸಿದರು. ಕುಂಬಾರ ಗುಂಡಯ್ಯ ಬಸವ ಶರಣರು, ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಇದ್ದರು.   

ನ್ಯಾಮತಿ: ‘ಕುಂಬಾರ ಸಮುದಾಯ 2 ‘ಎ’ ಜಾತಿ ಪ್ರಮಾಣಪತ್ರ ಪಡೆಯುವಲ್ಲಿ ಇರುವ ಗೊಂದಲ ಸಮಸ್ಯೆ ಅರಿವು ಇದೆ. ಜಾತಿ ಪ್ರಮಾಣಪತ್ರ ಕೊಡುವಲ್ಲಿ ಆಗಿರುವ ಗೊಂದಲದ ಬಗ್ಗೆ ಅಧಿವೇಶನದಲ್ಲಿ ಮುಖ್ಯಮಂತ್ರಿ, ಅಧಿಕಾರಿಗಳ ಜೊತೆ ಪ್ರಾಮಾಣಿಕವಾಗಿ ಚರ್ಚಿಸುತ್ತೇನೆ’ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಭರವಸೆ ನೀಡಿದರು.

ಪಟ್ಟಣದಲ್ಲಿ ಭಾನುವಾರ ತಾಲ್ಲೂಕು ಕುಂಬಾರ ಸಮಾಜ, ಕುಂಬಾರ ಯುವಸೈನ್ಯ, ಮಹಿಳಾ ಸಂಘಟನೆ ಹಾಗೂ ಕುಂಭೇಶ್ವರ ಕುಂಬಾರ ವಿವಿಧೋದ್ದೇಶ ಸಹಕಾರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕುಂಬಾರ ಸಮಾಜದ ಒಗ್ಗಟ್ಟು ಪ್ರದರ್ಶನ, 2 ‘ಎ’ ಜಾತಿ ಪ್ರಮಾಣಪತ್ರದ ಗೊಂದಲ ಪರಿಹಾರ ಕುರಿತ ವಿಚಾರಸಂಕಿರಣ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ತೆಲಸಂಗ ಕುಂಬಾರ ಗುರುಪೀಠದ ಕುಂಬಾರ ಗುಂಡಯ್ಯ ಬಸವ ಶರಣರು, ಚನ್ನಗಿರಿ ಕೇದಾರ ಶಾಖಾಮಠದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಾಜದ ಜಿಲ್ಲಾಧ್ಯಕ್ಷ ಕೆ.ಟಿ. ಪ್ರವೀಣಕುಮಾರ, ಕಾರ್ಯಾಧ್ಯಕ್ಷ ರಾಜಶೇಖರ ಕುಂಬಾರ, ಕತ್ತಿಗೆ ಗಂಗಾಧರಪ್ಪ, ಶಂಕರಶೆಟ್ಟಿ, ಹೊಸಮನೆ ಮಲ್ಲಿಕಾರ್ಜುನ, ಉಮಾ ಓಂಕಾರ, ಚೀಲೂರು ರುದ್ರಪ್ಪ, ಕೆ.ಎಸ್. ಮಂಜುನಾಥ, ಉಮಾ ರಮೇಶ, ಶಿವಕುಮಾರ, ಪುಟ್ಟಪ್ಪ, ಸುಧಾ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.