ADVERTISEMENT

ಚನ್ನಗಿರಿ: ಹಿರೇಮಳಲಿ ಗ್ರಾಮದ ಸ್ಮಶಾನ ಭೂಮಿ ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 13:44 IST
Last Updated 16 ನವೆಂಬರ್ 2024, 13:44 IST
ಚನ್ನಗಿರಿ ತಾಲ್ಲೂಕು ಹಿರೇಮಳಲಿ ಗ್ರಾಮದಲ್ಲಿ ತಹಶೀಲ್ದಾರ್ ಜಿ.ಎಸ್. ಶಂಕರಪ್ಪ ನೇತೃತ್ವದಲ್ಲಿ ಸ್ಮಶಾನ ಭೂಮಿ ಒತ್ತುವರಿ ತೆರವು ಕಾರ್ಯ ಶನಿವಾರ ನಡೆಯಿತು
ಚನ್ನಗಿರಿ ತಾಲ್ಲೂಕು ಹಿರೇಮಳಲಿ ಗ್ರಾಮದಲ್ಲಿ ತಹಶೀಲ್ದಾರ್ ಜಿ.ಎಸ್. ಶಂಕರಪ್ಪ ನೇತೃತ್ವದಲ್ಲಿ ಸ್ಮಶಾನ ಭೂಮಿ ಒತ್ತುವರಿ ತೆರವು ಕಾರ್ಯ ಶನಿವಾರ ನಡೆಯಿತು   

ಚನ್ನಗಿರಿ: ತಾಲ್ಲೂಕಿನ ಹಿರೇಮಳಲಿಯಲ್ಲಿ ಒತ್ತುವರಿಯಾಗಿದ್ದ ಸ್ಮಶಾನ ಭೂಮಿಯನ್ನು ತಹಶೀಲ್ದಾರ್ ಶನಿವಾರ ತೆರವುಗೊಳಿಸಿದರು.

ಸ್ಮಶಾನಕ್ಕಾಗಿ ಸರ್ವೆ ನಂಬರ್ 39/1ರಲ್ಲಿ 1 ಎಕರೆ ಜಮೀನನ್ನು ಸರ್ಕಾರದಿಂದ ನೀಡಲಾಗಿತ್ತು. ಆದರೆ ಭೂಮಿಯನ್ನು ಗ್ರಾಮದ ಕೆಲವರು ಒತ್ತುವರಿ ಮಾಡಿದ್ದು, ಅಂತ್ಯಸಂಸ್ಕಾರಕ್ಕೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದರು.

ಭೂ ಮಾಪನ ಇಲಾಖೆಯ ಅಧಿಕಾರಿಗಳಿಂದ ಭೂಮಿಯನ್ನು ಅಳತೆ ಮಾಡಿಸಿ, ಒತ್ತುವರಿ ತೆರವು ಮಾಡಲಾಯಿತು. ಹಾಗೆಯೇ ನರೇಗಾ ಯೋಜನೆ ಅಡಿಯಲ್ಲಿ ಸ್ಮಶಾನದ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಪಿಡಿಒಗೆ ಸೂಚಿಸಲಾಗಿದೆ ಎಂದು ತಹಶೀಲ್ದಾರ್ ಜಿ.ಎಸ್. ಶಂಕರಪ್ಪ ತಿಳಿಸಿದರು.

ADVERTISEMENT

ಪಿಡಿಒ ರೇಖಾ, ಕಾರ್ಯದರ್ಶಿ ಗದ್ದಿಗೇಶ್, ಗ್ರಾಮದ ಮುಖಂಡರಾದ ಮೈಲಾರಪ್ಪ, ರವಿಕುಮಾರ್, ರಾಜಪ್ಪ, ಈಶ್ವರಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.