ADVERTISEMENT

ಚನ್ನಗಿರಿ: ಪಟ್ಟಣ ಸೇರಿ ಸುತ್ತಮುತ್ತಲ ಗ್ರಾಮಗಳಲ್ಲಿ ಬಿರುಸಿನ ಮಳೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 14:34 IST
Last Updated 18 ಜೂನ್ 2024, 14:34 IST
ಚನ್ನಗಿರಿ ತಾಲ್ಲೂಕು ಲಕ್ಷ್ಮೀಸಾಗರ ಗ್ರಾಮದಲ್ಲಿ ಸೋಮವಾರ ಸಂಜೆ ಬಿದ್ದ ಮಳೆಗೆ ಹಳ್ಳ ತುಂಬಿ ಹರಿದಿರುವುದು
ಚನ್ನಗಿರಿ ತಾಲ್ಲೂಕು ಲಕ್ಷ್ಮೀಸಾಗರ ಗ್ರಾಮದಲ್ಲಿ ಸೋಮವಾರ ಸಂಜೆ ಬಿದ್ದ ಮಳೆಗೆ ಹಳ್ಳ ತುಂಬಿ ಹರಿದಿರುವುದು    

ಚನ್ನಗಿರಿ: ಪಟ್ಟಣ ಸೇರಿ ಸುತ್ತಮುತ್ತಲ ಹಲವಾರು ಗ್ರಾಮಗಳಲ್ಲಿ ಸೋಮವಾರ ಸಂಜೆ ಬಿರುಸಿನ ಮಳೆಯಾಗಿದೆ. ಮಳೆಯಿಂದಾಗಿ ಹಲವು ಹಳ್ಳಕೊಳ್ಳಗಳು ತುಂಬಿ ಹರಿದಿವೆ.

ಚನ್ನಗಿರಿ ಪಟ್ಟಣದಲ್ಲಿ 3.8 ಸೆಂ.ಮೀ ಹಾಗೂ ಜೋಳದಹಾಳ್ ಗ್ರಾಮದಲ್ಲಿ 0.2 ಮಿ.ಮೀ ಮಳೆಯಾಗಿದೆ. ಇನ್ನುಳಿದಂತೆ ತಾಲ್ಲೂಕಿನ ಯಾವ ಭಾಗದಲ್ಲೂ ಮಳೆಯಾಗಿಲ್ಲ.

ಪಟ್ಟಣದ ಸುತ್ತಮುತ್ತಲ ಗ್ರಾಮಗಳಾದ ಲಕ್ಷ್ಮಿಸಾಗರ, ದಿಗ್ಗೇನಹಳ್ಳಿ, ಮಲ್ಲಿಗೆರೆ, ಅಜ್ಜಿಹಳ್ಳಿ, ಮುದ್ದೇನಹಳ್ಳಿ, ಹೊನ್ನೇಬಾಗಿ, ರಾಜಗೊಂಡನಹಳ್ಳಿ, ಪಾಂಡೋಮಟ್ಟಿ, ಮಾಚನಾಯಕನಹಳ್ಳಿ, ಗರಗ, ನಾರಶೆಟ್ಟಿಹಳ್ಳಿ ಮುಂತಾದ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ.

ADVERTISEMENT

ಲಕ್ಷ್ಮಿಸಾಗರ ಹಾಗೂ ಮಲ್ಲಿಗೆರೆ ಗ್ರಾಮಗಳಲ್ಲಿನ ಹಳ್ಳಗಳು ತುಂಬಿ ಹರಿದಿವೆ. ಈ ಭಾಗದ ಬಹುತೇಕ ಚೆಕ್ ಡ್ಯಾಂಗಳು ತುಂಬಿವೆ. ರೈತರ ತೋಟಗಳಲ್ಲಿ ಯಥೇಚ್ಛ ಪ್ರಮಾಣದಲ್ಲಿ ಮಳೆ ನೀರು ನಿಂತಿದೆ. ಈ ಭಾಗದಲ್ಲಿ ವಾರದಿಂದ ಮಳೆ ಇಲ್ಲದೇ ರೈತರು ಮಳೆಗಾಗಿ ಕಾಯುತ್ತಿದ್ದರು. ಈಗ ಬಿದ್ದಿರುವ ಮಳೆಯಿಂದಾಗಿ ರೈತರಲ್ಲಿ ಹರ್ಷ ಮೂಡಿದೆ.

ಚನ್ನಗಿರಿ ತಾಲ್ಲೂಕು ಮಲ್ಲಿಗೆರೆ ಗ್ರಾಮದಲ್ಲಿ ಸೋಮವಾರ ಸಂಜೆ ಬಿದ್ದ ಮಳೆಗೆ ರಸ್ತೆಯಲ್ಲಿ ಮಳೆಯ ನೀರು ಹರಿಯುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.