ADVERTISEMENT

ಸಹಕಾರ ರಂಗದಲ್ಲಿ ರಾಜಕೀಯ ಬೆರೆಸಬೇಡಿ: ಶಿವಗಂಗಾ

ಚನ್ನಗಿರಿ: ಅಖಿಲ ಭಾರತ ಸಹಕಾರ ಸಪ್ತಾಹ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 12:58 IST
Last Updated 16 ನವೆಂಬರ್ 2024, 12:58 IST
ಚನ್ನಗಿರಿಯಲ್ಲಿ ಶನಿವಾರ ನಡೆದ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಶಾಸಕ ಬಸವರಾಜು ವಿ. ಶಿವಗಂಗಾ ಉದ್ಘಾಟಿಸಿದರು
ಚನ್ನಗಿರಿಯಲ್ಲಿ ಶನಿವಾರ ನಡೆದ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಶಾಸಕ ಬಸವರಾಜು ವಿ. ಶಿವಗಂಗಾ ಉದ್ಘಾಟಿಸಿದರು   

ಚನ್ನಗಿರಿ: ‘ರೈತರ ಹಾಗೂ ದೇಶದ ಅಭಿವೃದ್ಧಿಗೆ ಸಹಕಾರ ರಂಗದ ಕೊಡುಗೆ ಅನನ್ಯವಾದದ್ದು. ರೈತರ ಬೆನ್ನೆಲೆಬಾಗಿರುವ ಸಹಕಾರ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಬೆರೆಸಬಾರದು’ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ತಿಳಿಸಿದರು.

ಪಟ್ಟಣದಲ್ಲಿ ಸಹಕಾರ ಇಲಾಖೆ, ಸಹಕಾರ ಮಹಾ ಮಂಡಳ ಹಾಗೂ ತುಮ್ಕೋಸ್ ಸಹಯೋಗದಲ್ಲಿ ಶನಿವಾರ ನಡೆದ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ತಾಲ್ಲೂಕಿನಲ್ಲಿ 251 ಸಹಕಾರ ಸಂಘಗಳು ನೋಂದಾಣಿಯಾಗಿದ್ದು, ಈ ಪೈಕಿ 206 ಸಂಘಗಳ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ತುಮ್ಕೋಸ್ ಸಂಸ್ಥೆ ಅತ್ಯುತ್ತಮ ಸಹಕಾರ ಸಂಘವಾಗಿ ಹೊರಹೊಮ್ಮಿದ್ದು, ಅಡಿಕೆ ಬೆಳೆಗಾರರ ಹಿತ ಕಾಪಾಡುತ್ತಿದೆ. ರಾಜಕೀಯ ಪ್ರೇರಿತವಾದರೆ ಸಹಕಾರ ಸಂಘಗಳು ಅವನತಿ ಹೊಂದುತ್ತವೆ. ಸಹಕಾರ ರಂಗದಲ್ಲಿ ಆಧುನಿಕ ಸ್ಪರ್ಶ ಬೇಕಾಗಿದೆ. ಎಂಎನ್‌ಸಿ ಕಂಪನಿಗಳಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಸಹಕಾರಿ ಸಂಘಗಳನ್ನು ಉಳಿಸಿ, ಬೆಳೆಸುವ ಕಡೆಗೆ ಎಲ್ಲರೂ ಗಮನಹರಿಸಬೇಕು’ ಎಂದರು.

ADVERTISEMENT

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ, ನಿರ್ದೇಶಕರಾದ ಜಿ.ಎನ್. ಸ್ವಾಮಿ, ಜಿ.ಎಸ್. ಸಂತೋಷ್, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ, ಶಿವಮೊಗ್ಗ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಎಚ್.ಕೆ. ಬಸಪ್ಪ, ನೀರು ಬಳಕೆದಾರರ ಸಂಘದ ನಿರ್ದೆಶಕ ತೇಜಸ್ವಿ ವಿ. ಪಟೇಲ್, ಎಸ್.ಬಿ. ಶಿವಕುಮಾರ್, ಸಹಕಾರ ಸಂಘಗಳ ಉಪ ನಿಬಂಧಕ ಟಿ. ಮಧು ಶ್ರೀನಿವಾಸ್, ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ವಿ. ವಿಜಯ ಉಪಸ್ಥಿತರಿದ್ದರು. ರಾಜ್ಯ ಸಹಕಾರ ಮಹಾ ಮಂಡಳದ ನಿರ್ದೇಶಕ ಜೆ.ಆರ್. ಷಣ್ಮುಖಪ್ಪ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.