ಸಾಸ್ವೆಹಳ್ಳಿ: ಸಮೀಪದ ಬಾಗೇವಾಡಿಯ ತುಂಗಭದ್ರಾ ನದಿಯಲ್ಲಿ ಭಾನುವಾರ ಮೊಸಳೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ದನ ಮೇಯಿಸಲು ಹೋದ ಗ್ರಾಮದ ಕೆಲವರಿಗೆ ಮೊಸಳೆ ಕಾಣಿಸಿಕೊಂಡಿದೆ. ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ನದಿ ಪಾತ್ರದಲ್ಲಿ ಬಟ್ಟೆ ತೊಳೆಯಲು, ಸ್ನಾನ ಮಾಡಲು, ಜಾನುವಾರುಗಳು ಮೇಯಿಸಲು ಹೋಗುವ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಗ್ರಾಮದಲ್ಲಿ ಟಾಂಟಾಂ ಹೊಡೆಸಿರುವುದಾಗಿ ಬಾಗೇವಾಡಿಯ ಮುಖಂಡ ರಾಜರಾವ್ ಬಿ.ಕೆ. ತಿಳಿಸಿದರು.
ಮೊಸಳೆ ಕಾಣಿಸಿಕೊಂಡ ಬಗ್ಗೆ ಮಾಹಿತಿ ಇಲ್ಲ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷವೂ ರಾಂಪುರ, ಹೊಟ್ಯಾಪುರ ಗೋವಿನಕೋವಿ ಸಮೀಪ ಮೊಸಳೆ ಕಾಣಿಸಿಕೊಂಡಿತ್ತು. ಎರಡು ವರ್ಷಗಳ ಹಿಂದೆ ಸಾಸ್ವೆಹಳ್ಳಿ ನದಿಯ ದಡದಲ್ಲಿ ಸಿಕ್ಕ ಮೊಸಳೆ ಮರಿಗಳನ್ನು ಅರಣ್ಯ ಇಲಾಖೆಯವರು ಸ್ಥಳಾಂತರಿಸಿದ್ದರು.
ಸಾಸ್ವೆಹಳ್ಳಿಯ ತುಂಗಭದ್ರಾ ನದಿಗೆ ಹೊಂದಿಕೊಂಡಂತೆ ಇರುವ ಬೊಮ್ಮನಹಳ್ಳಿ ಹಳ್ಳದ ಚೆಕ್‌ಡ್ಯಾಂಗಳಲ್ಲೂ ಮೊಸಳೆಗಳು ಇವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.