ADVERTISEMENT

ಹರಿಹರ | ಗ್ಯಾರಂಟಿ ಭರಾಟೆಯಲ್ಲಿ ಅಭಿವೃದ್ಧಿಗೆ ಹಿನ್ನೆಡೆ

ಹರಿಹರ: ಶಾಸಕ ಹರೀಶ್ ಬೇಸರ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2024, 15:33 IST
Last Updated 17 ಸೆಪ್ಟೆಂಬರ್ 2024, 15:33 IST
ಹರಿಹರದ ಆಸ್ಪತ್ರೆ ರಸ್ತೆ ಕಾಮಗಾರಿಗೆ ಶಾಸಕ ಬಿ.ಪಿ.ಹರೀಶ್ ಮಂಗಳವಾರ ಭೂಮಿಪೂಜೆ ನೆರವೇರಿಸಿದರು
ಹರಿಹರದ ಆಸ್ಪತ್ರೆ ರಸ್ತೆ ಕಾಮಗಾರಿಗೆ ಶಾಸಕ ಬಿ.ಪಿ.ಹರೀಶ್ ಮಂಗಳವಾರ ಭೂಮಿಪೂಜೆ ನೆರವೇರಿಸಿದರು    

ಹರಿಹರ: ಕಾಂಗ್ರೆಸ್ ಸರ್ಕಾರವು ಕ್ಷೇತ್ರಾಭಿವೃದ್ಧಿಗೆ ಅನುದಾನ ನೀಡದ್ದರಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನೆಡೆ ಉಂಟಾಗಿದೆ ಎಂದು ಶಾಸಕ ಬಿ.ಪಿ.ಹರೀಶ್ ಆರೋಪಿಸಿದರು.

ನಗರದ ಸಾರ್ವಜನಿಕ ಆಸ್ಪತ್ರೆ ರಸ್ತೆ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ನೇತೃತ್ವದ ಸರ್ಕಾರವು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದರಲ್ಲೇ ಸುಸ್ತಾಗುತ್ತಿದೆ. ನನ್ನ ಕ್ಷೇತ್ರಕ್ಕೂ ₹ 2 ಕೋಟಿ ಕ್ಷೇತ್ರಾಭಿವೃದ್ಧಿ ಅನುದಾನ ಮಾತ್ರ ಆಧಾರವಾಗಿದ್ದು, ಬೇರೆ ಯಾವುದೇ ಮೂಲದಿಂದ ಅನುದಾನ ಸಿಗುತ್ತಿಲ್ಲ’ ಎಂದರು.

‘ಆಸ್ಪತ್ರೆಗೆ ರೋಗಿಗಳು ಸಂಚರಿಸುವ ಈ ರಸ್ತೆ ಗುಂಡಿಮಯವಾಗಿದ್ದು, ಹೊಸ ರಸ್ತೆ ನಿರ್ಮಾಣ ಅಗತ್ಯವಾಗಿತ್ತು. ನಗರಸಭೆಯು ಈ ರಸ್ತೆ ಕಾಮಗಾರಿಗೆ ಆದ್ಯೆತೆ ನೀಡಿರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ’ ಎಂದರು.

ADVERTISEMENT

‘ಆಸ್ಪತ್ರೆ ರಸ್ತೆ ಅವ್ಯವಸ್ಥೆ ಇರುವ ಕುರಿತು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿದ್ದವು. ನಗರಸಭಾ ಸದಸ್ಯರೆಲ್ಲರೂ ಸೇರಿ ಪೌರಾಯುಕ್ತರಿಗೆ ಮನವರಿಕೆ ಮಾಡಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ’ ಎಂದು ನಗರಸಭಾಧ್ಯಕ್ಷೆ ಕವಿತಾ ಮಾರುತಿ ಬೇಡರ್ ಹೇಳಿದರು.

ನಗರಸಭೆ ಉಪಾಧ್ಯಕ್ಷ ಎಂ.ಜಂಬಣ್ಣ ಹೇಳಿದರು, ಪೌರಯುಕ್ತ ಸುಬ್ರಹ್ಮಣ್ಯ ಶ್ರೇಷ್ಠಿ ಮಾತನಾಡಿದರು.

ನಗರಸಭಾ ಸದಸ್ಯ ಎಂ.ಎಸ್.ಬಾಬುಲಾಲ್, ಎಂಜಿನಿಯರ್ ಮಂಜುನಾಥ್, ಭಾನುವಳ್ಳಿ ಅಬ್ದುಲ್ ರೆಹಮಾನ್, ಮುಖಂಡರಾದ ಮಾರುತಿ ಬೇಡರ್, ಮಂಜುನಾಥ್ ಫೈನಾನ್ಸ್, ಸೈಯದ್ ಸನಾವುಲ್ಲಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.