ADVERTISEMENT

ದಾವಣಗೆರೆ: ಕೈಗೆಟಕುವ ದರದಲ್ಲಿ ತರಕಾರಿ

ಡಿ.ಕೆ.ಬಸವರಾಜು
Published 29 ಆಗಸ್ಟ್ 2023, 6:02 IST
Last Updated 29 ಆಗಸ್ಟ್ 2023, 6:02 IST
ತರಕಾರಿ (ಸಾಂದರ್ಭಿಕ ಚಿತ್ರ)
ತರಕಾರಿ (ಸಾಂದರ್ಭಿಕ ಚಿತ್ರ)   

ದಾವಣಗೆರೆ: ಕೆಲ ದಿನಗಳ ಹಿಂದೆ ₹120 ಇದ್ದ ದರ ಈಗ ₹20–₹30ಕ್ಕೆ ಇಳಿದಿದೆ. ನಗರದ ಮಾರುಕಟ್ಟೆಯಲ್ಲಿ ತರಕಾರಿಗಳು ಕೈಗೆಟಕುವ ದರದಲ್ಲಿ ಸಿಗುತ್ತಿದ್ದು, ಗ್ರಾಹಕರಿಗೆ ತುಸು ನೆಮ್ಮದಿ ತಂದಿದೆ.

₹ 140 ಇದ್ದ ಹಸಿರುಮೆಣಸು ₹ 40ಕ್ಕೆ ಇಳಿದಿದೆ. ₹120ಕ್ಕೆ ಏರಿದ್ದ ಬೀನ್ಸ್‌ ₹ 60, ಬದನೆಕಾಯಿ ₹ 60 ಇದ್ದಿದ್ದು, ₹ 20ಕ್ಕೆ ಇಳಿದಿದೆ. ₹ 80 ಇದ್ದ ಹೀರೆಕಾಯಿ ₹40ಕ್ಕೆ ಇಳಿದಿದೆ. ಕೊತ್ತಂಬರಿ ಸೊಪ್ಪು ₹10ಕ್ಕೆ 4 ಕಟ್ಟುಗಳು ಸಿಗುತ್ತಿವೆ.

ಈಗ ತರಕಾರಿ ಸೀಸನ್ ಆರಂಭವಾಗಿದೆ. ಅಕ್ಟೋಬರ್ ತಿಂಗಳು ಬರುತ್ತಿದ್ದಂತೆ ಮತ್ತೆ ದರ ಏರಿಕೆಯಾಗುವ ಸಂಭವವಿದೆ. ಜಿಲ್ಲೆಯಲ್ಲಿ ಬೆಳೆಯುವ ತರಕಾರಿಗಳು ಬೇರೆ ಕಡೆ ಹೋದರೆ ಇಲ್ಲಿ ಅವುಗಳ ದರ ಹೆಚ್ಚಾಗುತ್ತದೆ. ಶಿರಸಿ, ಮಂಗಳೂರು ಸೇರಿದಂತೆ ಮಹಾರಾಷ್ಟ್ರದವರೆಗೂ ಜಿಲ್ಲೆಯಿಂದ ತರಕಾರಿ ಹೋಗುತ್ತದೆ. ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದಲೂ ಜಿಲ್ಲೆಗೆ ತರಕಾರಿ ಬರುತ್ತಿವೆ’ ಎಂದು ತರಕಾರಿ ವ್ಯಾಪಾರಿ ವಸಂತ್ ತಿಳಿಸಿದರು.

ADVERTISEMENT

‘ಇಲ್ಲಿ ಬೀನ್ಸ್ ಕಡಿಮೆ ಇದೆ, ತಮಿಳುನಾಡಿನಿಂದ ಜವಳಿಕಾಯಿ ಜಿಲ್ಲೆಗೆ ಬರುತ್ತವೆ. ಟೊಮೆಟೊಗೆ ಹೆಚ್ಚಿನ ದರ ಬಂದಿದ್ದರಿಂದ ಈಗ ಎಲ್ಲಾ ಕಡೆ ಹೆಚ್ಚಾಗಿ ಬೆಳೆದಿದ್ದಾರೆ. ಮದುವೆ ಸೀಸನ್ ಬಂದರೆ ತರಕಾರಿಗೆ ಬೆಲೆ ಜಾಸ್ತಿ ಇರುತ್ತದೆ. ಹಬ್ಬಗಳಲ್ಲಿ 4ರಿಂದ 5 ದಿನ ತರಕಾರಿ ಬೆಲೆ ಜಾಸ್ತಿ ಇರುತ್ತದೆ. ಆಮೇಲೇ ಮಾಮೂಲಿಯಾಗುತ್ತದೆ’ ಎಂದು ಹೇಳಿದರು.

‘ಬೆಂಗಳೂರು, ಮಹಾರಾಷ್ಟ್ರಗಳಿಂದ ಕ್ಯಾರೆಟ್ ಜಿಲ್ಲೆಗೆ ಬರುತ್ತಿದೆ. ಜಿಲ್ಲೆಯಲ್ಲಿ ಈರೇಕಾಯಿ, ಟೊಮೊಟೊ, ಸೌತೇಕಾಯಿಯನ್ನು ಬೆಳೆಯುತ್ತಾರೆ. ತರಕಾರಿ ಒಂದು ದಿನದಲ್ಲಿ ಮಾರಾಟವಾಗದಿದ್ದರೆ ವ್ಯರ್ಥವಾಗುತ್ತದೆ’ ಎಂದು ವಸಂತ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.