ನ್ಯಾಮತಿ: ಶಾಸಕ ಎಂ.ಪಿ. ರೇಣುಕಾಚಾರ್ಯ ಮತ್ತು ಅವರ ಪತ್ನಿ ಸುಮಾ ಅವರನ್ನು ಅವಳಿ ತಾಲ್ಲೂಕಿನ ನೌಕರರು ಮತ್ತು ಅಭಿಮಾನಿಗಳು ಹೃದಯತುಂಬಿ ಸನ್ಮಾನಿಸಿದರು.
ಕೊರೊನಾ ವಾರಿಯರ್‌ಗಳಿಗೆ ಸನ್ಮಾನ ಕಾರ್ಯಕ್ರಮದ ನಿಮಿತ್ತ ಓಡಾಡುತ್ತಿದ್ದ ರೇಣುಕಾಚಾರ್ಯ ಮತ್ತು ಅವರ ಪತ್ನಿಯನ್ನು ನೌಕರರು, ಅಭಿಮಾನಿಗಳು ವೇದಿಕೆಗೆ ಕರೆತಂದು ಸನ್ಮಾನಿಸಿ, ಪುಷ್ಪ ಎರಚಿ ಘೋಷಣೆ ಕೂಗಿದರು.
ಶಾಸಕ ರೇಣುಕಾಚಾರ್ಯ ಮಾತನಾಡಿ, ‘ಅವಳಿ ತಾಲ್ಲೂಕಿನ ಜನರ ಸೇವಕ ನಾನು. ಅವಳಿ ತಾಲ್ಲೂಕು ರಾಜ್ಯದಲ್ಲಿಯೇ ಮಾದರಿಯಾಗಬೇಕು ಎಂಬ ಕನಸು ಕಂಡಿರುವೆ. ನಿಮ್ಮ ಆಶೀರ್ವಾದ ಸದಾ ನನಗೆ ಇರಲಿ’ ಎಂದು ಭಾವುಕರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.