ADVERTISEMENT

ಸಿಲಿಂಡರ್‌ ಸ್ಫೋಟ: ನಾಲ್ವರ ಸ್ಥಿತಿ ಗಂಭೀರ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 17:56 IST
Last Updated 2 ಜುಲೈ 2024, 17:56 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ದಾವಣಗೆರೆ: ಇಲ್ಲಿನ ರಾಮನಗರದ ಎಸ್‌ಒಜಿ ಕಾಲೊನಿಯಲ್ಲಿ ಅಡುಗೆ ಅನಿಲದ ಸಿಲಿಂಡರ್‌ ಸ್ಫೋಟಗೊಂಡು ಐವರು ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ.

ಎಸ್‌ಒಜಿ ಕಾಲೊನಿ ನಿವಾಸಿಗಳಾದ ಮಲ್ಲೇಶಪ್ಪ (60), ಲಲಿತಮ್ಮ (50), ಸೌಭಾಗ್ಯ (36), ಪಾರ್ವತಮ್ಮ (45), ಪ್ರವೀಣ್ (35) ಗಾಯಗೊಂಡವರು. ಮಲ್ಲೇಶಪ್ಪ, ಲಲಿತಮ್ಮ, ಸೌಭಾಗ್ಯ ಹಾಗೂ ಪಾರ್ವತಮ್ಮ ಅವರಿಗೆ ಶೇ 70ರಷ್ಟು ಸುಟ್ಟ ಗಾಯಗಳಾಗಿವೆ. ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದು, ಹೆಚ್ಚಿನ ಚಿಕಿತ್ಸೆಗೆ ಎಸ್‌.ಎಸ್‌. ಹೈಟೆಕ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಮಲ್ಲೇಶಪ್ಪ ಮತ್ತು ಲಲಿತಮ್ಮ ದಂಪತಿ ಮಂಗಳವಾರ ಸಂಜೆ ಟೀ ಕಾಯಿಸಿಕೊಂಡಿದ್ದಾರೆ. ಕೆಲ ಹೊತ್ತಿನ ಬಳಿಕ ಅಡುಗೆ ಅನಿಲ ಸೋರಿಕೆಯಾಗಿದ್ದು ಗಮನಕ್ಕೆ ಬಂದಿದೆ. ಸೋರಿಕೆಯನ್ನು ಪರಿಶೀಲಿಸಲು ಪಕ್ಕದ ಮನೆಯ ನಿವಾಸಿಗಳನ್ನು ಕರೆದಿದ್ದಾರೆ. ಸೌಭಾಗ್ಯ, ಪಾರ್ವತಮ್ಮ, ಪ್ರವೀಣ್‌ ಧಾವಿಸಿ ಅಡುಗೆ ಮನೆಯ ವಿದ್ಯುತ್‌ ದೀಪದ ಸ್ವಿಚ್‌ ಒತ್ತಿದ ತಕ್ಷಣ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಸಿಲಿಂಡರ್ ಸ್ಫೋಟದಿಂದ ಇಡೀ ಮನೆಗೆ ಹಾನಿಯಾಗಿದೆ. ಸ್ಫೋಟದ ಸದ್ದು ಕಾಲೊನಿಗೆ ಕೇಳಿಸಿದ್ದು, ಜನರು ಬೆಚ್ಚಿಬಿದ್ದಿದ್ದಾರೆ. ಗಾಯಾಳುಗಳನ್ನು ತಕ್ಷಣ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಸಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.