ಹರಿಹರ: ಇಲ್ಲಿನ ಹಿಂದೂ-ಮುಸ್ಲಿಮರ ಭಾವೈಕ್ಯದ ಕ್ಷೇತ್ರ ಹಜರತ್ ಸೈಯದ್ ನಾಡಬಂದ್ ಷಾವಲಿ ದರ್ಗಾದ ಉರುಸ್ ಫೆಬ್ರುವರಿ 22, 23 ಮತ್ತು 24ರಂದು ನಡೆಯಲಿದೆ ಎಂದು ದರ್ಗಾ ಸಮಿತಿ ಗೌರವಾಧ್ಯಕ್ಷ ಬಿ.ಕೆ.ಸೈಯದ್ ರಹಮಾನ್ ಹೇಳಿದರು.
ಫೆ.22ರಂದು ಮದ್ಯಾಹ್ನ 2.30ಕ್ಕೆ ಫಕೀರರು, ಭಕ್ತಾದಿಗಳಿಂದ ಸಂದಲ್ (ಗಂಧ) ಮೆರವಣಿಗೆ ನಡೆಯಲಿದೆ. ಫೆ.23ರಂದು ಬೆಳಿಗ್ಗೆಯಿಂದ ಸಂಜೆವರೆಗೆ ಫಾತೆಹಾ (ಪೂಜೆ), ವಿವಿಧ ಧಾರ್ಮಿಕ, ಸಾಮಾಜಿಕ ಪ್ರವಚನ ನಡೆಯಲಿದೆ. ರಾತ್ರಿ 10ರಿಂದ ನಾಗಪುರದ ಖಲೀಲ್ ಸೈಯದ್ ಮತ್ತು ಹೈದರಾಬಾದಿನ ಮೊಹ್ಮದ್ ಅಲಿ ಸಾದಿಖ್ ಚಿಸ್ತಿ ತಂಡದವರಿಂದ ನಾತ್-ಎ-ಖವಾಲಿ ನಡೆಯಲಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಫೆ.24 ರಂದು ಮಧ್ಯಾಹ್ನ 2ರಿಂದ ದರ್ಗಾದ ಆವರಣದಲ್ಲಿ ಅನ್ನ ಸಂತರ್ಪಣೆ ನಡೆಯಲಿದೆ. ಸಂಸದರು, ಸಚಿವರು, ಶಾಸಕರು, ಮಾಜಿ ಸಚಿವರು, ನಗರಸಭೆ ಸದಸ್ಯರು ಭಾಗವಹಿಸುವರು ಎಂದರು.
ದರ್ಗಾ ಸಮಿತಿಯ ಸೈಯದ್ ಆಸಿಫ್ ಜುನೈದಿ, ಅಲಿ ಅಹ್ಮದ್, ರಹಮತ್ ಉರ್ ರೆಹಮಾನ್, ಅಹ್ಮದ್ ಖಾನ್, ಇಬ್ರಾಹಿಂ ಸಾಬ್, ಸೈಯದ್ ಮಖ್‌ಬೂಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.